ಚಿತ್ರದುರ್ಗ: ನಿವೇಶನದ ಇ-ಸ್ವತ್ತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಿಡಿಒ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನಲ್ಲಿ ನಡೆದಿದೆ.
ನಿವೇಶನ ಇ-ಸ್ವತ್ತಿಗೆ ಮಾಡಲು ಲಂಚದ ಬೇಡಿಕೆ : ಎಸಿಬಿ ಬಲೆಗೆ ಬಿದ್ದ ತಾಳ್ಯ ಪಿಡಿಒ - talya pdo in chitradurga
ಲಂಚ ಸ್ವೀಕಾರ ಮಾಡುವ ವೇಳೆ ಎಸಿಬಿ ಡಿವೈಎಸ್ ಪಿ ಬಸವರಾಜ್ ಆರ್ ಮಗದುಮ್ ನೇತೃತ್ವದಲ್ಲಿ ದಾಳಿ ಮಾಡಿದೆ. ಇದೀಗ ಲಂಚ ಸ್ವೀಕಾರ ಮಾಡಿದ ತಪ್ಪಿಗೆ ಪಿಡಿಒ ಸಂದೀಪ್ ವಿಚಾರಣೆಗೊಳಗಾಗಿದ್ದಾರೆ..
Acb raid
ನೇರಳಕಟ್ಟೆ ಗ್ರಾಮದ ಮೂರ್ತಪ್ಪ ಅನ್ನೋರು ಮನೆ ನಿವೇಶನದ ಇ-ಸ್ವತ್ತಿಗೆ ಅರ್ಜಿಸಲ್ಲಿಸಿದ್ದರು. ಇ-ಸ್ವತ್ತನ್ನು ನೀಡಲು ಪಿಡಿಒ ಸಂದೀಪ ಕುಮಾರ್ ₹2 ಸಾವಿರ ಲಂಚಕ್ಕೆ ಮೂರ್ತಪ್ಪ ಅವರ ಬಳಿ ಬೇಡಿಕೆಯಿಟ್ಟಿದ್ದರು.
ಲಂಚ ಸ್ವೀಕಾರ ಮಾಡುವ ವೇಳೆ ಎಸಿಬಿ ಡಿವೈಎಸ್ ಪಿ ಬಸವರಾಜ್ ಆರ್ ಮಗದುಮ್ ನೇತೃತ್ವದಲ್ಲಿ ದಾಳಿ ಮಾಡಿದೆ. ಇದೀಗ ಲಂಚ ಸ್ವೀಕಾರ ಮಾಡಿದ ತಪ್ಪಿಗೆ ಪಿಡಿಒ ಸಂದೀಪ್ ವಿಚಾರಣೆಗೊಳಗಾಗಿದ್ದಾರೆ.