ರಾಯಚೂರು:ಬಾಲಕಿಯೊಬ್ಬಳುಬಾವಿಗೆ ಕಾಲು ಜಾರಿ ಬಿದ್ದ ಪರಿಣಾಮ ಸಾವಿಗೀಡಾದ ಘಟನೆ ಜಿಲ್ಲೆಯ ಮಸ್ಕಿ ತಾಲೂಕು ಕುಣೆಕೆಲ್ಲೂರು ಗ್ರಾಮದಲ್ಲಿ ನಡೆದಿದೆ. ಮೇಘಾ(17) ಮೃತ ಬಾಲಕಿ.
ಬಾವಿಯೊಳಗಿನ ಮೀನು ನೋಡಲು ಹೋಗಿದ್ದ ಬಾಲಕಿ ಅಕಸ್ಮಿಕವಾಗಿ ಜಾರಿ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ. ಈ ವೇಳೆ ಬಾಲಕಿ ಮೇಲೆ ಬರಲು ಎಷ್ಟೇ ಪ್ರಯತ್ನಪಟ್ಟರೂ, ನೀರಿನ ಕೆಳಗೆಡೆ ಕೆಸರಿನಲ್ಲಿ ಸಿಲುಕಿದ ಪರಿಣಾಮ ಅವಳು ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎನ್ನಲಾಗ್ತಿದೆ.