ಹುಬ್ಬಳ್ಳಿ:ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಮಗನಿಗೆ ತಂದೆಯೊಬ್ಬರು ಚಾಕುವಿನಿಂದ ಇರಿದ ಘಟನೆ ಹಳೇ ಹುಬ್ಬಳ್ಳಿಯಲ್ಲಿ ನಡೆದಿದೆ. ಶಂಕರ ರಾಮಕೃಷ್ಣ ಸೂಗೂರ ಎಂಬುವರು ತಮ್ಮ ಮಗ ಜಗದೀಶ್ ಶಂಕರ ಸೂಗೂರ (31)ಗೆ ಚಾಕುವಿನಿಂದ ಇರಿದಿದ್ದಾರೆ.
ಮಗ ಜಗದೀಶನು ತಂದೆ ಹಾಗೂ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಗೆ ಸಿಕ್ಕ ವಸ್ತುಗಳನ್ನ ಎಸೆದು, ಕಿರುಕುಳ ನೀಡುತ್ತಿದ್ದನಂತೆ. ಮಗನ ಕಿರುಕುಳಕ್ಕೆ ಬೇಸತ್ತ ಅಪ್ಪನು ಸಿಟ್ಟಿನಿಂದ ಮಗನ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ.