ಮುಂಬೈ:ಖಚಿತ ಮಾಹಿತಿ ಮೇರೆಗೆ ನಕಲಿ ನೋಟು ವಹಿವಾಟು ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಮುಂಬೈ ಅಪರಾಧ ದಳದ ಪೊಲೀಸರು ದಾಳಿ ನಡೆಸಿ, ಆತನನ್ನು ಬಂಧಿಸಿದ್ದಾರೆ. ಬಂಧಿತನಿಂದ 80 ಲಕ್ಷ ಮೌಲ್ಯದ ನಕಲಿ ನೋಟು ವಶಕ್ಕೆ ಪಡೆಯಲಾಗಿದೆ. 500 ರೂ ಮುಖಬೆಲೆಯ 160 ಬಂಡಲ್ ನಕಲಿ ನೋಟನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಸೌಜನ್ಯಭೂಷಣ್ ಪಾಟೀಲ್ (31) ಎಂದು ಗುರುತಿಸಲಾಗಿದೆ.
ಬಂಧಿತನ ವಿರುದ್ಧ ಪ್ರಕರಣ ದಾಖಲು: ಪಾವೈ ಪೊಲೀಸ್ ಠಾಣಾ ಕಾನ್ಸ್ಟೇಬಲ್ ಸತೀಶ್ ಕಾಂಬ್ಳೆ ಈ ನಕಲಿ ನೋಟಿನ ವಹಿವಾಟು ಸಂಬಂಧ ಮಾಹಿತಿಯನ್ನು ಪಡೆದಿದ್ದರು. ಪ್ರತಿ ನಿತ್ಯದ ವ್ಯವಹಾರಕ್ಕೆ ಹೊಂದಿಸಲು ಮತ್ತು ಈ ನೋಟುಅನ್ನು ಚಲಾವಣೆ ಮಾಡಲು ಯತ್ನಿಸಿದ ಆರೋಪಿಯನ್ನು ಟ್ರಾಪ್ ಮಾಡಿ ಪೊವಾಯ್‌ನಲ್ಲಿರುವ ಅಂಬೇಡ್ಕರ್ ಗಾರ್ಡನ್ ಬಳಿಯ ಸಾಕಿ ವಿಹಾರ್ ರಸ್ತೆಯಲ್ಲಿ ಬಂಧಿಸಿದ್ದಾರೆ.
500 ರೂ ಮುಖಬೆಲೆ ನಕಲಿ ನೋಟು:ಕೆಂಪು ಬ್ಯಾಂಕ್ ಹೊಂದಿದ ಎಂಚ್ 48 ಎಜೆಡ್ 1576 ಎಂಬ ಬೈಕ್ವೊಂದು ಅನುಮಾನಾಸ್ಪದ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಇದನ್ನು ಪರಿಶೀಲಿಸಿದಾಗ ಅದರಲ್ಲಿ ನಕಲಿ ನೋಟುಗಳು ಪತ್ತೆಯಾದವು. 500 ರೂ ಮುಖಬೆಲೆಯ 160 ಬಂಡಲ್ ಪತ್ತೆಯಾಗಿವೆ. ಇದರಲ್ಲಿ ಪ್ರತಿ ಬಂಡಲ್ನಲ್ಲೂ 100 ರೂಪಾಯಿ ನಕಲಿ ನೋಟುಗಳು ಕೂಡ ಇವೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜನವರಿ 4ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಏತನ್ಮಧ್ಯೆ, ಪೊಲೀಸರು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಈತ ಈ ಹಿಂದೆ ನಕಲಿ ನೋಟುಗಳನ್ನು ಎಲ್ಲಿ ಚಲಾವಣೆ ಮಾಡಿದ್ದನು ಮತ್ತು ಆತನೊಂದಿಗೆ ಬೇರೆ ಯಾರು ಶಾಮೀಲಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಾರತೀಯ ಆರ್ಥಿಕತೆಗೆ ಹಾನಿ ಮಾಡುವ ಉದ್ದೇಶ: ಆರೋಪಿ ತನ್ನ ಆರ್ಥಿಕ ಲಾಭಕ್ಕಾಗಿ ಭಾರತೀಯ ಆರ್ಥಿಕತೆಗೆ ಹಾನಿ ಮಾಡುವ ಉದ್ದೇಶವನ್ನು ಹೊಂದಿದ್ದ ಎಂದು ಪೊಲೀಸ್ ಉಪ ಆಯುಕ್ತ ಕೃಷ್ಣಕಾಂತ್ ಉಪದ್ಯಾಯ್ ತಿಳಿಸಿದ್ದಾರೆ.
ಇದನ್ನೂ ಓದಿ:ಆನ್ಲೈನ್ ಜೂಜು ಗೀಳು: ಸಾಲದ ಹೊರೆಗೆ ಹೆದರಿ ಯುವಕ ಆತ್ಮಹತ್ಯೆ