ಕರ್ನಾಟಕ

karnataka

ETV Bharat / crime

ದಾಂಡೇಲಿಯಲ್ಲಿ 72 ಲಕ್ಷ ರೂ. ಖೋಟಾ ನೋಟು ವಶ: 6 ಜನ ಆರೋಪಿಗಳ ಬಂಧನ - ಖೋಟಾ ನೋಟು ವ್ಯವಹಾರ

ಬಂಧಿತರಿಂದ 4.5 ಲಕ್ಷ ಅಸಲಿ ನೋಟು, 72 ಲಕ್ಷದ ಖೋಟಾ ನೋಟು ವಶಕ್ಕೆ ಪಡೆಲಾಗಿದೆ. ಮಹಾರಾಷ್ಟ್ರದ ಕಿರಣ ದೇಸಾಯಿ (40), ಗಿರೀಶ ಪೂಜಾರಿ (42), ಬೆಳಗಾವಿಯ ಅಮರ ನಾಯ್ಕ (30), ಸಾಗರ ಕುಣ್ಣೂರ್ಕರ್ (28), ದಾಂಡೇಲಿಯ ಶಬ್ಬೀರ್ ಕುಟ್ಟಿ (45), ಶಿವಾಜಿ ಕಾಂಬ್ಳೆ (52) ಬಂಧಿತ ಆರೋಪಿಗಳು.

-fake-currency
ಖೋಟಾ ನೋಟು ವಶ

By

Published : Jun 2, 2021, 3:34 PM IST

ಶಿರಸಿ:ಅಸಲಿ ನೋಟು ಪಡೆದು ನಕಲಿ ನೋಟುಗಳನ್ನು ಪಡೆದುಕೊಳ್ಳುವ ವೇಳೆ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಭಾರಿ ಪ್ರಮಾಣದ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.‌

ಖೋಟಾ ನೋಟು ವಶ

ಓದಿ: ಸಿಸಿಬಿ ಪೊಲೀಸರ ಕಾರ್ಯಾಚರಣೆ: ದರೋಡೆಗೆ ಸಂಚು ರೂಪಿಸಿದ್ದ ಐವರು ಆರೋಪಿಗಳ ಬಂಧನ

ಘಟನೆಯಲ್ಲಿ ಖೋಟಾ ನೋಟು ವ್ಯವಹಾರ ಮಾಡುತ್ತಿದ್ದ 6 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 4.5 ಲಕ್ಷ ಅಸಲಿ ನೋಟು, 72 ಲಕ್ಷದ ಖೋಟಾ ನೋಟು ವಶಕ್ಕೆ ಪಡೆಲಾಗಿದೆ. ಮಹಾರಾಷ್ಟ್ರದ ಕಿರಣ ದೇಸಾಯಿ (40), ಗಿರೀಶ ಪೂಜಾರಿ (42), ಬೆಳಗಾವಿಯ ಅಮರ ನಾಯ್ಕ (30), ಸಾಗರ ಕುಣ್ಣೂರ್ಕರ್ (28), ದಾಂಡೇಲಿಯ ಶಬ್ಬೀರ್ ಕುಟ್ಟಿ (45), ಶಿವಾಜಿ ಕಾಂಬ್ಳೆ (52) ಬಂಧಿತ ಆರೋಪಿಗಳು.

ಡಿಡಿಎಲ್ ವನಶ್ರೀ ಭಾಗದ ಶಿವಾಜಿ ಕಾಂಬ್ಳೆ ಎನ್ನುವವರ ಮನೆಯಲ್ಲಿ ಹಣ ವಶಕ್ಕೆ ಪಡೆಯಲಾಗಿದೆ. 4.5 ಲಕ್ಷ ಅಸಲಿ ನೋಟು ಪಡೆದು 9 ಲಕ್ಷ ರೂ ನಕಲಿ ನೋಟು ನೀಡಲು ಮುಂದಾಗಿದ್ದ ವೇಳೆ ದಾಳಿ ನಡೆಸಲಾಗಿದೆ. ಇದೇ ವೇಳೆ, ವ್ಯವಹಾರಕ್ಕೆ ಬಳಸಿದ್ದ ಎರಡು ಕಾರು ವಶಪಡಿಸಿಕೊಂಡಿದ್ದು, ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details