ವಿಶಾಖಪಟ್ಟಣಂ(ಆಂಧ್ರಪ್ರದೇಶ): ನಕ್ಸಲ ನಿಗ್ರಹ ಪಡೆ ಹಾಗೂ ಮಾವೋವಾದಿಗಳ ನಡುವೆ ನಡೆದ ಗುಂಡಿನ ಕಾಳಗದ ವೇಳೆ ಆರು ಮಂದಿ ಕೆಂಪು ಉಗ್ರರು ಹತರಾಗಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂದ ಟೆಗಲೆಮೆಟ್ಟಾ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಆಂಧ್ರ ಪೊಲೀಸರ ಕಾರ್ಯಾಚರಣೆ; 6 ಮಂದಿ ನಕ್ಸಲರ ಹತ್ಯೆ - ನಕ್ಸಲರ ಹತ್ಯೆ
ಆಂಧ್ರಪ್ರದೇಶದ ವಿಶಾಖಪಟ್ಟಣಂನ ಟೆಗಲೆಮೆಟ್ಟಾ ಅರಣ್ಯ ಪ್ರದೇಶದಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಆರು ಮಂದಿ ನಕ್ಸಲರು ಹತರಾಗಿದ್ದಾರೆ. ಇನ್ನೂ ಹಲವು ನಕ್ಸಲರು ಇರುವ ಶಂಕೆ ಇದ್ದು, ಕೂಂಬಿಂಗ್ ಮುಂದುವರಿದಿದೆ..
ಓರ್ವ ಹಿರಿಯ ಮಾವೋವಾದಿ ಹಾಗೂ ಮಹಿಳೆ ಸೇರಿದಂತೆ ಆರು ಮಂದಿಯ ಮೃತದೇಹಗಳನ್ನು ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಈ ಎನ್ಕೌಂಟರ್ ನಡೆದಿದೆ.
ಹತರಾದ ಎಲ್ಲ ಮಾವೋವಾದಿಗಳು ಸಿಪಿಐ ಸಂಘಟನೆಗೆ ಸೇರಿದವರು ಎಂದು ತಿಳಿದು ಬಂದಿದೆ. ಗ್ರೇಹೌಂಡ್ಸ್ ನಕ್ಸಲ ನಿಗ್ರಹಾ ಪಡೆ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು ಎಂದು ತಿಳಿದು ಬಂದಿದೆ. ಘಟನಾ ಸ್ಥಳದಿಂದ ಎಕೆ-47, ಎಸ್ಎಲ್ಆರ್, ಕಾರ್ಬೈನ್, ಮೂರು 303 ರೈಫಲ್ಸ್ ಹಾಗೂ ಕಂಟ್ರಿ ಪಿಸ್ತೂಲ್ ವಶ ಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಹಚ್ಚಿನ ನಕ್ಸಲರು ಇರುವ ಶಂಕೆ ಹಿನ್ನೆಲೆಯಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.