ಸಂಭಾಲ್ (ಉತ್ತರ ಪ್ರದೇಶ): ಗುನ್ನೌರ್‌ನಲ್ಲಿ ವಿಷಪೂರಿತ ಮದ್ಯ ಸೇವಿಸಿ ಮೃತಪಟ್ಟ ಮೂವರ ಸಾವು ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಗುನ್ನೌರ್‌ನಲ್ಲಿ ಶಿವರಾತ್ರಿ ವೇಳೆ ಹೆಚ್ಚು ರಾಸಾಯನಿಕ ಬಳಸಿದ ಮದ್ಯವನ್ನು ತಯಾರಿಸಿ ಅಕ್ರಮವಾಗಿ ಗ್ರಾಮದಲ್ಲಿ ಮಾರಾಟ ಮಾಡಲಾಗಿತ್ತು. ಇದನ್ನು ಸೇವಿಸಿದ ತಂದೆ, ಮಗ ಸೇರಿ ಮೂವರು ಸಾವನ್ನಪ್ಪಿದ್ದರು. ಈ ಬಗ್ಗೆ ಮಾಹಿತಿ ಬಂದರೂ ಗುನ್ನೌರ್ ಠಾಣಾ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.