ಕರ್ನಾಟಕ

karnataka

By

Published : May 30, 2021, 10:29 AM IST

ETV Bharat / crime

ಅಲಿಗಢ ಮದ್ಯ ದುರಂತ: ಮೃತರ ಸಂಖ್ಯೆ 55ಕ್ಕೆ ಏರಿಕೆ

ಅಲಿಗಢ ಮದ್ಯ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 55ಕ್ಕೆ ಏರಿಕೆಯಾಗಿದ್ದು, ಇನ್ನೂ 17 ಮಂದಿಯ ಸ್ಥಿತಿ ಗಂಭೀರವಾಗಿದೆ.

Aligarh Hooch Tragedy
ಅಲಿಗಢ ಮದ್ಯ ದುರಂತ

ಅಲಿಗಢ:ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ ಸೇವಿಸಿದ್ದವರು ಸಾಯುತ್ತಲೇ ಇದ್ದು, ಮೃತರ ಸಂಖ್ಯೆ ಇದೀಗ 55ಕ್ಕೆ ಏರಿಕೆಯಾಗಿ ಕರ್ಸುವಾ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಮೇ 28ರಂದು ಅಲಿಗಢದ ಕರ್ಸುವಾ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಮದ್ಯ ಸೇವಿಸಿ 11 ಮಂದಿ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಮತ್ತೆ 17 ಜನರು ಮೃತಪಟ್ಟಿರುವುದು ವರದಿಯಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮತ್ತೆ ಹಲವರು ಉಸಿರು ನಿಲ್ಲಿಸಿದ್ದು, ಒಟ್ಟು 55 ಮಂದಿ ಮೃತಪಟ್ಟಂತಾಗಿದೆ. ಇನ್ನೂ 17 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಬಿಟ್‌ಕಾಯಿನ್ ಮೂಲಕ ಡ್ರಗ್ಸ್ ಖರೀದಿಸಿ, ಬೆಂಗಳೂರಿನಲ್ಲಿ ಮಾರಾಟ: ನೈಜೀರಿಯಾ ಪ್ರಜೆ ಸೇರಿ 6 ಮಂದಿ ಅರೆಸ್ಟ್

ಅಲಿಗಢ ಜಿಲ್ಲಾಧಿಕಾರಿ ಚಂದ್ರ ಭೂಷಣ್ ಸಿಂಗ್ ಅವರು ಮದ್ಯ ಪ್ರಕರಣದಲ್ಲಿ ಮೃತಪಟ್ಟವರ ಅಂಕಿ ಅಂಶವನ್ನು ಮರೆಮಾಚುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಅಬಕಾರಿ ಇಲಾಖೆಯು ಮದ್ಯ ಮಾಫಿಯಾವನ್ನು ತಡೆಯಲು ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಪ್ರಕರಣ ಸಂಬಂಧ ಲೋಧಾ, ಖೈರ್ ಮತ್ತು ಜವಾಂನ ಪೊಲೀಸ್​ ಠಾಣೆಗಳಲ್ಲಿ 12 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇನ್ನು ಘಟನೆ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಕರಣದ​ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ABOUT THE AUTHOR

...view details