ಪಳನಿ(ತಮಿಳುನಾಡು):ವಾರ್ಷಿಕ ಮೆರವಣಿಗೆ ವೇಳೆ 400 ವರ್ಷ ಹಳೆಯ ಚಿನ್ನ ಮತ್ತು ತಾಮ್ರದ ಶೂಲಗಳು ನಾಪತ್ತೆಯಾಗಿರುವ ಘಟನೆ ಪಳಿನಿ ದೇವಸ್ಥಾನದಲ್ಲಿ ನಡೆದಿದೆ. ಕಾರೈಕುಡಿಯಿಂದ ಪಳನಿ ದೇವಸ್ಥಾನದ ಮಾರ್ಗ ಮಧ್ಯ ಶೂಲಗಳು ಕಳುವಾಗಿವೆ ಎನ್ನಲಾಗಿದೆ.
ಕರಿಕುಡಿ, ಪುದುಕೊಟ್ಟೈ ಮತ್ತು ಶಿವಗಂಗೈಯ ನಗರಥರ್ ಸಮುದಾಯವು 1601 ರಿಂದ ಅಂದರೆ ಕಳೆದ 422 ವರ್ಷಗಳಿಂದ ಈ ಯಾತ್ರೆ ಮಾಡುತ್ತಾ ಬಂದಿವೆ. ಜ.13 ರಂದು ನಾಥಮ್ ಪ್ರದೇಶವನ್ನು ತಲುಪಿದಾಗ ಮೆರವಣಿಗೆ ತಂಡ ಪೆರುಮಾಳ್ ದೇವಸ್ಥಾನದಲ್ಲಿ ಉಳಿದುಕೊಂಡಿದ್ದರು.