ಫ್ಲೋರಿಡಾ: ಪ್ರಯಾಣಿಕರ ಬಸ್‌ವೊಂದರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದರೆ, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ನಡೆದಿದೆ.
ಫೋರ್ಟ್ ಲಾಡರ್‌ಡೇಲ್ ಪೊಲೀಸ್ ಪ್ರಧಾನ ಕಚೇರಿ ಹೊರಗೆ ಗುರುವಾರ ಬ್ರೋವರ್ಡ್ ಕೌಂಟಿ ಪ್ರಯಾಣಿಕ ಬಸ್‌ನಲ್ಲಿ ಕೃತ್ಯ ಸಂಭವಿಸಿದೆ. ದುರಂತದಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.