ಮುಂಬೈ: ಇಥಿಯೋಪಿಯಾದಿಂದ ಭಾರತಕ್ಕೆ ಬಂದ ವ್ಯಕ್ತಿಯೊಬ್ಬನಿಂದ ಅಕ್ರಮವಾಗಿ ದೇಶದೊಳಗೆ ತರಲಾಗುತ್ತಿದ್ದ 16 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಥಿಯೋಪಿಯಾದ ಅಡಿಸ್ ಅಬಾಬಾದಿಂದ ಮುಂಬೈ ಏರ್ಪೋರ್ಟ್ಗೆ ಬಂದ ಭಾರತೀಯ ಪ್ರಜೆ 8.40 ಕೋಟಿ ಬೆಲೆಬಾಳುವ 16 ಕೆಜಿ ಚಿನ್ನವನ್ನು ಅಕ್ರಮವಾಗಿ ಭಾರತದೊಳಗೆ ತರಲು ಯತ್ನಿಸುತ್ತಿದ್ದ. ಮುಂಬೈ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಈ ವ್ಯಕ್ತಿಯನ್ನು ಬಂಧಿಸಿ ಚಿನ್ನ ವಶಪಡಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಡಿಸ್ ಅಬಾಬಾದಿಂದ ಬಂದ ಭಾರತೀಯ ಪ್ರಯಾಣಿಕನಿಂದ 8.40 ಕೋಟಿ ಮೌಲ್ಯದ 12 ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಗೌಪ್ಯ ಮಾಹಿತಿ ಬಂದಿತ್ತು. ಈ ಮಾಹಿತಿ ಆಧರಿಸಿ ಅಧಿಕಾರಿಗಳು ಇಥಿಯೋಪಿಯನ್ ಏರ್ ಲೈನ್ಸ್ ವಿಮಾನದಲ್ಲಿ ಬಂದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.