ಕರ್ನಾಟಕ

karnataka

ETV Bharat / crime

ನೆರೆ ಮನೆಯ ವ್ಯಕ್ತಿಯಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ, ಹಲ್ಲೆ - ರಾಜಸ್ಥಾನ ಅತ್ಯಾಚಾರ ಸುದ್ದಿ

ಬಾಲಕಿಯ ಪೋಷಕರು ಮನೆಯಲ್ಲಿರದ ವೇಳೆ ಪಕ್ಕದ ಮನೆಯ ಕಾಮುಕನೋರ್ವ ಅಟ್ಟಹಾಸ ಮೆರೆದಿದ್ದಾನೆ. ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕ, ರಕ್ತಸಿಕ್ತ ಸ್ಥಿತಿಯಲ್ಲಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.

13 year old minor raped by calling home under the pretext of work
ನೆರೆ ಮನೆಯ ವ್ಯಕ್ತಿಯಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ

By

Published : Feb 25, 2021, 7:27 AM IST

ಜೈಪುರ (ರಾಜಸ್ಥಾನ): 13 ವರ್ಷದ ಬಾಲಕಿ ಮೇಲೆ ನೆರೆ ಮನೆಯ ವ್ಯಕ್ತಿಯೇ ಅತ್ಯಾಚಾರವೆಸಗಿ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಜೈಪುರದ ಪ್ರತಾಪ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಲಕಿಯ ಪೋಷಕರು ಮನೆಯಲ್ಲಿರದ ವೇಳೆ ಆಕೆಯನ್ನು ಯಾವುದೋ ಕೆಲಸದ ನೆಪದಲ್ಲಿ ತನ್ನ ಮನೆಗೆ ಕರೆಯಿಸಿಕೊಂಡ ಕಾಮುಕ ಈ ಕೃತ್ಯ ಎಸಗಿದ್ದಾನೆ. ರಕ್ತಸಿಕ್ತ ಸ್ಥಿತಿಯಲ್ಲಿ ಅಪ್ರಾಪ್ತೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಮನೆಗೆ ಹಿಂದಿರುಗಿದಾಗ ಮಗಳನ್ನು ಕಂಡು ಆಘಾತಕ್ಕೊಳಗಾದ ತಾಯಿ, ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪ್ರತಾಪ್ ನಗರ ಪೊಲೀಸರು ಸಂತ್ರಸ್ತೆಯನ್ನು ನಗರದ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಶೋ ರೂಂಗೆ ನುಗ್ಗಿ 32 ಲಕ್ಷ ಮೌಲ್ಯದ ಎರಡು ಕಾರು ಕದ್ದ ಖದೀಮರು

ಬಾಲಕಿ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಶೇಷ ತಂಡವನ್ನು ರಚಿಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details