ಚಾಮರಾಜನಗರ:12 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾಗಿರುವ ಕಳವಳಕಾರಿ ಘಟನೆ ಗುಂಡ್ಲುಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ 12 ವರ್ಷದ ಬಾಲಕಿ 3 ತಿಂಗಳ ಗರ್ಭಿಣಿಯಾಗಿದ್ದು, ಸದ್ಯ ಬಾಲಮಂದಿರದಲ್ಲಿ ಸಂತ್ರಸ್ತೆಯನ್ನು ಇರಿಸಲಾಗಿದೆ. ಮೊದಮೊದಲು ಚಿಕ್ಕಪ್ಪನ ಸ್ನೇಹಿತ ಇದಕ್ಕೆ ಕಾರಣ ಎಂದು ಹೇಳಿದ್ದ ಬಾಲಕಿ ಅದಾದ ಬಳಿಕ ಅಳಲು ಪ್ರಾರಂಭಿಸಿ ಆತಂಕ, ಭಯ, ಒತ್ತಡದಿಂದಾಗಿ ಹೆಚ್ಚೇನೂ ಹೇಳುತ್ತಿಲ್ಲ ಎಂದು ತಿಳಿದು ಬಂದಿದೆ.
ಚಾಮರಾಜನಗರ: ಗರ್ಭಿಣಿಯಾದ 12 ವರ್ಷದ ಬಾಲಕಿ, ಮಹಿಳಾ ಠಾಣೆಗೆ ದೂರು - ಈಟಿವಿ ಭಾರತ ಕನ್ನಡ
12 ವರ್ಷದ ಬಾಲಕಿಯೊಬ್ಬಳು ಗರ್ಭಿಣಿ ; ಮೊದಮೊದಲು ಚಿಕ್ಕಪ್ಪನ ಸ್ನೇಹಿತ ಇದಕ್ಕೆ ಕಾರಣ ಎಂದು ಹೇಳಿದ್ದ ಬಾಲಕಿ ಅದಾದ ಬಳಿಕ ಅಳಲು ಪ್ರಾರಂಭಿಸಿ ಆತಂಕ, ಭಯ, ಒತ್ತಡದಿಂದಾಗಿ ಹೆಚ್ಚೇನೂ ಹೇಳುತ್ತಿಲ್ಲ ಎಂದು ತಿಳಿದು ಬಂದಿದೆ.
12 year old girl pregnant incident in Chamarajanagar
ಈ ಸಂಬಂಧ ಕುಟುಂಬಸ್ಥರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು ಚಾಮರಾಜನಗರ ಮಹಿಳಾ ಠಾಣೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ದೂರು ಕೊಟ್ಟಿದ್ದಾರೆ. ಸಂತ್ರಸ್ತ ಬಾಲಕಿಯನ್ನು ಸಮಾಲೋಚನೆಗೆ ಒಳಪಡಿಸಲಾಗುತ್ತಿದೆ. ಗ್ರಾಮದ ಆಶಾ ಕಾರ್ಯಕರ್ತೆಯಿಂದ ಬಾಲಕಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.