ಇಟಾ (ಉತ್ತರ ಪ್ರದೇಶ): 9 ಟ್ರಾಕ್ಟರ್ಗಳನ್ನು ಹೊತ್ತ ವಾಹನ ಹಾಗೂ ಒಂದು ಟ್ರಕ್ ನಡುವೆ ಡಿಕ್ಕಿಯಾಗಿದ್ದು, ಪರಿಣಾಮ ಬೆಂಕಿ ಹೊತ್ತಿಕೊಂಡು ಎಲ್ಲಾ ವಾಹನಗಳು ಸುಟ್ಟು ಭಸ್ಮವಾಗಿವೆ. ಅಲ್ಲದೇ ಟ್ರಕ್ ಚಾಲಕ ಮೃತಪಟ್ಟಿದ್ದಾನೆ.
ಉತ್ತರ ಪ್ರದೇಶದ ಇಟಾ ಜಿಲ್ಲೆಯ ದೆಹಲಿ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಟ್ರಕ್ ಚಾಲಕನೊಂದಿಗಿದ್ದ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವರಾಜ್ ಕಂಪನಿಯ ಟ್ರಾಕ್ಟರ್ಗಳನ್ನು ಹೊತ್ತ ವಾಹನದ ಚಾಲಕ ಜಂಪ್ ಮಾಡಿ ಅಪಾಯದಿಂದ ಪಾರಾಗಿದ್ದಾನೆ.