ಹೈದರಾಬಾದ್, ತೆಲಂಗಾಣ: ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ನಗರದ ವಿವಿಧ ಭಾಗದಲ್ಲಿ ಪಟಾಕಿ ಸಿಡಿಸುತ್ತಿದ್ದ ಸುಮಾರು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುತ್ತಿದ್ದ 10 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಗರದಲ್ಲಿ ನಡೆದಿದೆ. ಸಿವಿಲ್ ಸರ್ಜನ್ ಡಾ.ನಜಾಬಿ ಬೇಗಂ ಮಾತನಾಡಿ, ನಿನ್ನೆ 3 ಪ್ರಕರಣಗಳಿದ್ದರೆ, ಇಂದು 10 ಪ್ರಕರಣಗಳು ದಾಖಲಾಗಿವೆ. 4 ಪ್ರಕರಣಗಳು ಗಂಭೀರವಾಗಿದ್ದು, ಈ ಪೈಕಿ ಬಾಲಕನೊಬ್ಬ ಕಣ್ಣು ಕಳೆದುಕೊಂಡಿದ್ದಾನೆ. ಉಳಿದ ಮೂವರಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಿದೆ ಎಂದು ಹೇಳಿದ್ದಾರೆ.