ಮಂಗಳೂರು:ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದು ಕಾರ್ಡ್ ಸಂಖ್ಯೆ ಹಾಗೂ ಎಕ್ಸ್ಪೈರಿ ದಿನಾಂಕ ಪಡೆದು ಹಂತಹಂತವಾಗಿ ಲಕ್ಷ ರೂ. ವಂಚನೆ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎಚ್ಚರ..ಎಚ್ಚರ... ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದು 1ಲಕ್ಷ ರೂ. ವಂಚನೆ: ದೂರು ದಾಖಲು - ಎಟಿಎಂ ಕಾರ್ಡ್ ಅವಧಿ
ತಮ್ಮ ಎಟಿಎಂ ಕಾರ್ಡ್ ಅವಧಿ ಮುಗಿದಿದೆ. ಆದ್ದರಿಂದ ಕಾರ್ಡ್ ರಿನಿವಲ್ ಮಾಡಲು ಡೆಬಿಟ್ ಕಾರ್ಡ್ ಸಂಖ್ಯೆ ಹಾಗೂ ಕಾರ್ಡ್ ಅವಧಿ ಮುಗಿಯುವ ದಿನಾಂಕದ ವಿವರವನ್ನು ಒದಗಿಸುವಂತೆ ತಿಳಿಸಿ, ಹಂತಹಂತವಾಗಿ ಲಕ್ಷ ರೂ. ವಂಚನೆ ಮಾಡಲಾಗಿದೆ.
ದೂರು ನೀಡಿದ ವ್ಯಕ್ತಿ ನಗರದ ಡೊಂಗರಕೇರಿಯ ಕೆನರಾ ಬ್ಯಾಂಕ್ ಫೌಂಡರ್ಸ್ ಬ್ರಾಂಚ್ನಲ್ಲಿ ಖಾತೆಯನ್ನು ಹೊಂದಿದ್ದಾರೆ. ಇವರಿಗೆ ಜೂನ್ 25ರಂದು ಮಧ್ಯಾಹ್ನ 3.45 ಸುಮಾರಿಗೆ ಗಂಟೆಗೆ +916372729087 ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದಾತ ತಾನು ಕೆನರಾ ಬ್ಯಾಂಕ್ ನಿಂದ ಕರೆ ಮಾಡುವುದಾಗಿ ತಿಳಿಸಿ ತಮ್ಮ ATM ಕಾರ್ಡ್ ಅವಧಿ ಮುಗಿದಿದೆ. ಆದ್ದರಿಂದ ಕಾರ್ಡ್ ರಿನಿವಲ್ ಮಾಡಲು ಡೆಬಿಟ್ ಕಾರ್ಡ್ ಸಂಖ್ಯೆ ಹಾಗೂ ಕಾರ್ಡ್ ಅವಧಿ ಮುಗಿಯುವ ದಿನಾಂಕದ ವಿವರ ಒದಗಿಸುವಂತೆ ತಿಳಿಸಿದ್ದಾನೆ.
ಅದರಂತೆ ದೂರು ನೀಡಿದ ಬ್ಯಾಂಕ್ ಖಾತೆದಾರ ಡೆಬಿಟ್ ಕಾರ್ಡ್ ಸಂಖ್ಯೆ ಹಾಗೂ ಅವಧಿ ಮುಗಿಯುವ ದಿನಾಂಕ ತಿಳಿಸಿರುತ್ತಾರೆ. ಕೂಡಲೇ ಅವರ ಬ್ಯಾಂಕ್ ಖಾತೆ ಯಿಂದ ಹಂತ ಹಂತವಾಗಿ ಒಟ್ಟು ಮೊತ್ತ 1,00,000 ಲಕ್ಷ ರೂ. ವರ್ಗಾಯಿಸಿಲಾಗಿದೆ ಎಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.