ತುಮಕೂರು: ನಾಡಿನಾದ್ಯಂತ ನಾಗರಪಂಚಮಿಯನ್ನ ಭಕ್ತಿಯಿಂದ ಆಚರಿಸಲಾಗುತ್ತಿದೆ. ಆದ್ರೆ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ನಾಗರಕಟ್ಟೆ ಬಳಿ ನಾಗರ ಕಲ್ಲಿಗೆ ಪೂಜೆ ಮಾಡಲು ಬರುವಂತಹ ಭಕ್ತರಿಗೆ ಅಚ್ಚರಿ ಕಾದಿತ್ತು.
ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ನಾಗರಕಟ್ಟೆ ಬಳಿ ಭಕ್ತರಿಗೆ ಕಾದಿತ್ತು ಈ ಅಚ್ಚರಿ! - ನಾಗರಪಂಚಮಿ
ನಾಡಿನಾದ್ಯಂತ ನಾಗರಪಂಚಮಿಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ. ಆದ್ರೆ, ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ನಾಗರಕಟ್ಟೆ ಬಳಿ ನಾಗರ ಕಲ್ಲಿಗೆ ಪೂಜೆ ಮಾಡಲು ಬರುವಂತಹ ಭಕ್ತರಿಗೆ ಅಚ್ಚರಿ ಕಾದಿತ್ತು. ಆ ಅಚ್ಚರಿ ಏನು ಅಂತೀರಾ?
ಹೌದು, ನಾಗರ ಕಲ್ಲಿಗೆ ಹಾಲು ಹಾಕುವ ಬದಲು ಹಸಿದ ಮಕ್ಕಳಿಗೆ ಮತ್ತು ಬಡ ಮಕ್ಕಳ ಹಸಿವು ನೀಗಿಸಲು ಇಲ್ಲಿರುವ ಪಾತ್ರೆಯಲ್ಲಿ ಹಾಕಿ ಎಂದು ಬ್ಯಾನರ್ ಕಟ್ಟಲಾಗಿದ್ದು, ಮಾನವ ಬಂಧುತ್ವ ವೇದಿಕೆಯಿಂದ ಈ ರೀತಿಯಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇನ್ನು ಹುತ್ತಕ್ಕೆ ಹಾಲು ಹಾಕುವ ಬದಲು ಹಸಿದ ಹೊಟ್ಟೆಗೆ ಹಾಲನ್ನು ಕೊಡಿ, ಹುತ್ತಕ್ಕೆ ಹಾಲು ಹಾಕಿ ವ್ಯರ್ಥ ಮಾಡಬೇಡಿ, ಇದು ಮೌಢ್ಯದ ಪರಮಾವಧಿ, ಅಪೌಷ್ಟಿಕ ಮಕ್ಕಳಿಗೆ ಹಾಲು ವಿತರಿಸೋಣ ಎಂಬ ಸ್ಲೋಗನ್ಗಳೊಂದಿಗೆ ಬ್ಯಾನರ್ಗಳನ್ನು ಕಟ್ಟಲಾಗಿದೆ. ಆದ್ರೆ ಇನ್ನೊಂದೆಡೆ ಸಾರ್ವಜನಿಕರು ಮಾತ್ರ ಹುತ್ತಕ್ಕೆ ಹಾಲು ಮತ್ತು ಹೂ ಗಳನ್ನು ಹಾಕಿ ಪೂಜೆಯಲ್ಲಿ ತೊಡಗಿಸಿಕೊಂಡಿದ್ದು ಸಾಮಾನ್ಯವಾಗಿತ್ತು. ಹಾಗೆಯೇ ಜಿಲ್ಲೆಯಲ್ಲಿ ನಾಗರ ಪಂಚಮಿ ದಿನ ಬಸವ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.