ಕರ್ನಾಟಕ

karnataka

ETV Bharat / city

ತುಮಕೂರಿನಲ್ಲಿ ಸಂತಾನಕ್ಕಾಗಿ ನೀಡಿದ ನಕಲಿ ಚಿಕಿತ್ಸೆಗೆ ಮಹಿಳೆ ಬಲಿ.. ವೈದ್ಯ ದಂಪತಿಯ ಬಂಧನ - Fake doctor couple arrested in Tumkur

ಮಕ್ಕಳಿಲ್ಲದೇ ನೊಂದಿದ್ದ ದಂಪತಿಗೆ ನಕಲಿ ವೈದ್ಯರು ನೀಡಿದ ಐವಿಎಫ್​ ಚಿಕಿತ್ಸೆಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಪೀಕಿದ್ದಲ್ಲದೇ, ಪ್ರಾಣಗಳ ಆಟವಾಡಿದ ನಕಲಿ ವೈದ್ಯರನ್ನು ಬಂಧಿಸಲಾಗಿದೆ.

woman-died-
ವೈದ್ಯ ದಂಪತಿಯ ಬಂಧನ

By

Published : Apr 25, 2022, 9:08 PM IST

ತುಮಕೂರು:ಮಕ್ಕಳಿಲ್ಲದ ದಂಪತಿಗೆ ಮಕ್ಕಳ ಭಾಗ್ಯ ಕಲ್ಪಿಸುವುದಾಗಿ ಭರವಸೆ ಮೂಡಿಸಿ ಲಕ್ಷಾಂತರ ರೂಪಾಯಿ ಹಣ ಪೀಕಿದ ನಕಲಿ ವೈದ್ಯ ದಂಪತಿಯ ಐವಿಎಫ್ ಚಿಕಿತ್ಸೆಗೆ ಮಹಿಳೆಯೊಬ್ಬಳು ಬಲಿಯಾಗಿದ್ದಾರೆ. ತಿಪಟೂರು ತಾಲೂಕಿನ ಬೆಳಗರಹಳ್ಳಿ ಗ್ರಾಮದ ಮಮತಾ (34) ಮೃತ ದುರ್ದೈವಿ.

ಮಮತಾಗೆ ಮಲ್ಲಿಕಾರ್ಜುನ್ ಜೊತೆಗೆ 15 ವರ್ಷಗಳ ಹಿಂದೆ ವಿವಾಹವಾಗಿತ್ತು. ಮಕ್ಕಳಾಗದ ಕಾರಣ ಹಲವು ಆಸ್ಪತ್ರೆ ಸುತ್ತಾಡಿದ್ದರು. ಈ ವೇಳೆ, ಮಂಡ್ಯ ಮೂಲದ ಮಂಜುನಾಥ್​ ಹಾಗೂ ಉಡುಪಿ ಮೂಲದ ವಾಣಿ ಎಂಬ ನಕಲಿ ವೈದ್ಯ ದಂಪತಿ ಮಮತಾ ಹಾಗೂ ಮಲ್ಲಿಕಾರ್ಜುನ್ ಅವರನ್ನ ಸಂಪರ್ಕಿಸಿ, ಮಕ್ಕಳಾಗುವಂತೆ ಐವಿಎಫ್ ಚಿಕಿತ್ಸೆ ನೀಡುತ್ತೇವೆ ಎಂದು ನಂಬಿಸಿದ್ದಾರೆ. ಅಲ್ಲದೇ, 4 ಲಕ್ಷ ಹಣ ಪಡೆದು 4 ತಿಂಗಳು ಅವೈಜ್ಞಾನಿಕವಾಗಿ ಐವಿಎಫ್ ಚಿಕಿತ್ಸೆ ನೀಡಿದ್ದಾರೆ.

ಚಿಕಿತ್ಸೆಯಿಂದ ಹಲವು ಕಾಯಿಲೆ:ನಂತರ ನಿಮ್ಮ ಗರ್ಭದಲ್ಲಿ ಮಗು ಬೆಳೆಯುತ್ತಿದೆ ಎಂದು ನಂಬಿಸಿ ಮತ್ತಷ್ಟು ಹಣ ಪೀಕಿದ್ದಾರೆ. ಕೆಲ ದಿನಗಳ ಬಳಿಕ ಮಮತಾ ಹೊಟ್ಟೆ ನೋವಿಗೆ ತುತ್ತಾಗಿದ್ದಾರೆ. ಬೇರೆ ಆಸ್ಪತ್ರೆಗೆ ದಾಖಲಾದಾಗ ನಕಲಿಗಳ ಅಸಲಿ ಸತ್ಯ ಬಯಲಾಗಿದೆ. ಮಮತಾ ಗರ್ಭಿಣಿಯಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ನಂತರ ತೀವ್ರ ಅನಾರೋಗ್ಯಕ್ಕೆ ಒಳಗಾದ ಮಮತಾ ನಕಲಿ ಚಿಕಿತ್ಸೆಯ ಪರಿಣಾಮವಾಗಿ ಗರ್ಭಕೋಶ, ಕಿಡ್ನಿ, ಹೃದಯ ಹಾಗೂ ಮೆದುಳು ಸಂಬಂಧಿ ಕಾಯಿಲೆಗೆ ತುತ್ತಾಗಿದ್ದಾರೆ. ಬೆಂಗಳೂರು ಸೇಂಟ್ ಜಾನ್ ಆಸ್ಪತ್ರೆ, ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ 3 ತಿಂಗಳು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದ ಕಾರಣ ಬೇಸತ್ತ ಪತಿ ಮಮತಾಳನ್ನ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಶನಿವಾರ ಮಮತಾ ಮೃತಪಟ್ಟಿದ್ದಾರೆ.

ಬೇರೆಯವರಿಗೂ ಚಿಕಿತ್ಸೆ ನೀಡಿರುವ ನಕಲಿ ವೈದ್ಯರು:ಮಕ್ಕಳಾಸೆಗೆ ನಕಲಿ ವೈದ್ಯ ದಂಪತಿಯ ಮೋಸದ ಜಾಲಕ್ಕೆ ಬಿದ್ದ ಪತಿ ಮಲ್ಲಿಕಾರ್ಜುನ್ ಹಣ ಹಾಗೂ ಪತ್ನಿಯನ್ನು ಕಳೆದುಕೊಂಡು ಕಣ್ಣೀರಿಡುವಂತಾಗಿದೆ. ನಕಲಿ ವೈದ್ಯ ದಂಪತಿ ತಿಪಟೂರು, ತುರುವೇಕೆರೆ, ಅರಸೀಕೆರೆ ಭಾಗದ ಹಲವಾರು ಗ್ರಾಮಗಳಲ್ಲಿ ಮಕ್ಕಳಿಲ್ಲದ ದಂಪತಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಚಿಕಿತ್ಸೆ ನೀಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಈ ಬಗ್ಗೆ ನೊಣವಿನಕೆರೆ ಪೊಲೀಸ್​ ಠಾಣೆಯಲ್ಲಿ ನಕಲಿ ವೈದ್ಯರಾದ ವಾಣಿ ಮತ್ತು ಮಂಜುನಾಥ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಾಣಿ ಮತ್ತು ಮಂಜುನಾಥ್ ಕೇವಲ ಎಸ್​ಎಸ್​ಎಲ್​ಸಿ ಪಾಸಾಗಿದ್ದು, ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ನಕಲಿ ವೈದ್ಯರನ್ನ ಬಂಧಿಸಿದ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಓದಿ:ಬ್ಲೇಡ್​​ನಿಂದ ಗಂಡನ ಕತ್ತು ಸೀಳಿದ ಪತ್ನಿ.. 'ಪುಷ್ಪ' ಚಿತ್ರದ ಸೀನ್​ನಂತೆ ನಡೀತು ಕೃತ್ಯ!

ABOUT THE AUTHOR

...view details