ಕರ್ನಾಟಕ

karnataka

ETV Bharat / city

ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿ: ಹೆಂಡತಿ, ಪ್ರಿಯಕರನ ಬಂಧನ - murder in tumkur

ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿಯಾಗಿದ್ದಾನೆ. ರಾಜು ಕೊಲೆಯಾದ ವ್ಯಕ್ತಿ. ರಾಕೇಶ್‌ ಹಾಗು ಮೀನಾಕ್ಷಿ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

wife and lover killed her husband in tumkur
ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿ

By

Published : Apr 14, 2022, 7:46 PM IST

Updated : Apr 14, 2022, 7:51 PM IST

ತುಮಕೂರು: ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿಯಾಗಿರುವ ಘಟನೆ ಶಿರಾ ತಾಲೂಕಿನ ಕರೇಜವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಂಡನನ್ನು ಕೊಲೆಗೈದ ಆರೋಪದಡಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಶಿರಾದ ಕಳ್ಳಂಬೆಳ್ಳ ಪೊಲೀಸರು ಬಂಧಿಸಿದ್ದಾರೆ. ರಾಜು(34) ಕೊಲೆಯಾದ ವ್ಯಕ್ತಿ. ರಾಕೇಶ್‌(19), ಮೀನಾಕ್ಷಿ(25) ಬಂಧಿತರು.

ಪ್ರಕರಣದ ವಿವರ: 8 ವರ್ಷಗಳ ಹಿಂದೆ ಮೀನಾಕ್ಷಿ-ರಾಜು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದೊಂದು ವರ್ಷದಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ರಾಜು ಎರಡು ತಿಂಗಳಿಂದ ಬೆಂಗಳೂರು ಬಿಟ್ಟು ಊರು ಸೇರಿದ್ದ. ಅದೇ ಊರಿನವನಾದ ರಾಕೇಶ್ ಒಂದು ವರ್ಷದ ಹಿಂದೆ ಮದುವೆ ಕಾರ್ಯಕ್ರಮವೊಂದರಲ್ಲಿ ಮೀನಾಕ್ಷಿಗೆ ಪರಿಚಯವಾಗಿದ್ದಾನೆ. ಮೀನಾಕ್ಷಿ ಮನೆಯಲ್ಲಿ ಬಟ್ಟೆ ಹೊಲಿಯುತ್ತಿದ್ದ ಹಿನ್ನೆಲೆಯಲ್ಲಿ ಬಟ್ಟೆ ಹೊಲಿಸುವ ನೆಪದಲ್ಲಿ ರಾಕೇಶ್ ಆಗಾಗ ಮನೆಗೆ ಬರುತ್ತಿದ್ದನು. ಇವರಿಬ್ಬರ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಯಾವಾಗ ಪತಿ ರಾಜು ಬೆಂಗಳೂರು ಬಿಟ್ಟು ಮನೆ ಸೇರಿದನೋ ಆಗ ಇವರಿಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದೆ.

ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿ

ಅಲ್ಲದೇ ರಾಜು ಅಗಾಗ ಕುಡಿದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನಂತೆ. ಈ ಎಲ್ಲಾ ವಿಚಾರವನ್ನು ರಾಕೇಶ್ ಜೊತೆ ಮೀನಾಕ್ಷಿ ಹೇಳಿಕೊಂಡಿದ್ದು, ನನ್ನ ಗಂಡನನ್ನು ಮುಗಿಸಿಬಿಡು ಅಂತ ಪ್ರಿಯಕರನ ಬಳಿ ಹೇಳಿಕೊಂಡಿದ್ದಾಳೆ. ಕಳೆದ ಶುಕ್ರವಾರ ರಾತ್ರಿ ರಾಜು ಮನೆ ಬಳಿಯ ತೋಟದಲ್ಲಿ ರಾಕೇಶ್, ರಾಜು ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ರಾಜುಗೆ‌ ಕಂಠಪೂರ್ತಿ ಬಿಯರ್ ಕುಡಿಸಿ ಬಳಿಕ ರಾಜು ತಲೆ ಮೇಲೆ ಕಲ್ಲು ಎತ್ತಿಹಾಕಿ‌ ಕೊಲೆ ಮಾಡಿದ್ದಾನೆ.

ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ರಾಜು ಬೈಕ್​ನಲ್ಲಿದ್ದ ಪೆಟ್ರೋಲ್ ತೆಗೆದು ಅದನ್ನು ಮೃತದೇಹಕ್ಕೆ ಸುರಿದು ಬೆಂಕಿ ಹಾಕಿ ರಾಕೇಶ್ ಎಸ್ಕೇಪ್ ಆಗಿದ್ದಾನೆ. ತೋಟದಲ್ಲಿ ಬೆಂಕಿ ನೋಡಿದ ರಾಜು ತಂದೆ ಓಡೋಡಿ‌ ಬಂದು ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ಪೊಲೀಸ್ ಭದ್ರತೆ

ರಾಜು ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿದ್ದಾರೆ. ರಾಜು ಅಂತ್ಯಕ್ರಿಯೆ ಆಗೋವರೆಗೂ ರಾಕೇಶ್, ರಾಜು ಮನೆಯಲ್ಲೇ ಓಡಾಡಿಕೊಂಡಿದ್ದಾನೆ. ಗಂಡನ ಸಾವಿನ ಸಂಬಂಧ ಪೊಲೀಸರಿಗೆ ದೂರು ಕೊಡೋದು ಬೇಡ, ಸತ್ತ ನನ್ನ ಗಂಡ ವಾಪಸ್ ಬರಲ್ಲ, ನನ್ನ ಗಂಡನೇ ಕುಡಿದು ಬೆಂಕಿ ಹಾಕಿಕೊಂಡಿದ್ದಾನೆಂದು ಕಥೆ ಕಟ್ಟಿದ್ದಾಳೆ. ಆದರೆ ಪೊಲೀಸರು ರಾಜು ತಂದೆ ಕಡೆಯಿಂದ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಪತ್ನಿಯ ಕೃತ್ಯ ಬಯಲಾಗಿದ್ದು ಈ ಇಬ್ಬರನ್ನೂ ಬಂಧಿಸಲಾಗಿದೆ, ತನಿಖೆ ಮುಂದುವರಿದಿದೆ.

Last Updated : Apr 14, 2022, 7:51 PM IST

ABOUT THE AUTHOR

...view details