ತುಮಕೂರು: ಸುಮಾರು ಒಂದು ದಶಕದ ಹಿಂದೆ ಬಂದ್ ಮಾಡಲಾಗಿದ್ದ ಸರ್ಕಾರಿ ಶಾಲೆಯನ್ನು ಗ್ರಾಮಸ್ಥರು ಪುನಃ ಬಾಗಿಲು ತೆರೆಸುವಲ್ಲಿ ಯಶಸ್ವಿಯಾಗಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರು ಕ್ಲಸ್ಟರ್ ವ್ಯಾಪ್ತಿಯ ಯರೇಕಟ್ಟೆ ಗ್ರಾಮದಲ್ಲಿ ನಡೆದಿದೆ.
ಖಾಸಗಿ ಶಾಲೆಗಳ ಭರಾಟೆಯ ನಡುವೆ ವಿದ್ಯಾರ್ಥಿಗಳ ಕೊರತೆಯಿಂದಾಗಿ 10 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಈ ಸರ್ಕಾರಿ ಶಾಲೆಯನ್ನು ಪುನಃ ಆರಂಭಿಸುವಂತೆ ಶಿಕ್ಷಣ ಇಲಾಖೆಗೆ ದುಂಬಾಲು ಬಿದ್ದ ಗ್ರಾಮಸ್ಥರು, ಶಾಲೆಗೆ ಮರುಜೀವ ನೀಡಿದ ಸಂತಸದಲ್ಲಿದ್ದಾರೆ. ಈ ಮೂಲಕ ಮತ್ತೆ ಶಾಲಾ ಆವರಣಲ್ಲಿ ಮಕ್ಕಳ ಚಿಲಿಪಿಲಿ ಕಲರವ ಕೇಳುವಂತಾಗಿದೆ.
ಇದನ್ನೂ ಓದಿ:ಬಿಟ್ಕಾಯಿನ್ ಕರೆನ್ಸಿಯಾಗಿ ರೂಪಾಂತರಿಸಲ್ಲ: ಸಚಿವೆ ನಿರ್ಮಲಾ ಸೀತಾರಾಮನ್