ತುಮಕೂರು:ಕಾನೂನು ಬದ್ದವಾಗಿ ಆಡಳಿತ ಮಾಡಲು ಬಿಡಿ. ಈಶ್ವರಾನಂದ ಸ್ವಾಮೀಜಿಗಳ ಎದುರಿಗೆ ಹೇಳುತ್ತೇನೆ, ನಾನು ಈ ಕ್ಷೇತ್ರದ ಪ್ರತಿನಿಧಿ. ನನಗಿಷ್ಟ ಬಂದ ಹಾಗೆ ಬೋರ್ಡ್ ಹಾಕ್ತೀನಿ ಅನ್ನೋದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಕಾನೂನು ಪ್ರಕಾರ, ಕನಕದಾಸರ ನಾಮಫಲಕ ಹಾಕಿ ಎಂದು ಶಾಂತಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಹೇಳಿರುವ ವಿಡಿಯೋ ದೊರೆತಿದೆ.
'ಸಿದ್ದಗಂಗಾ ಶ್ರೀಗಳೇ ಬಂದು ನನ್ನ ಹೆಸರಿಡು ಅಂದ್ರೂ ನಾನು ಒಪ್ಪಲ್ಲ, ಕಾನೂನು ಬದ್ದವಾಗಿ ಕೆಲ್ಸ ಮಾಡಲು ಬಿಡಿ' - ಈಶ್ವರಾನಂದ ಸ್ವಾಮೀಜಿ
ನನಗಿಷ್ಟ ಬಂದ ಹಾಗೆ ಬೋರ್ಡ್ ಹಾಕ್ತೀನಿ ಅನ್ನೋದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಕಾನೂನು ಬದ್ದವಾಗಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಶಾಂತಿಸಭೆಯಲ್ಲಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿರುವ ವಿಡಿಯೋ ದೊರೆತಿದೆ.

ಸಿದ್ದಗಂಗಾ ಶ್ರೀಗಳ ಬಗ್ಗೆ ಸಚಿವ ಮಾಧುಸ್ವಾಮಿ ಹೇಳಿಕೆ ವಿಡಿಯೋ ವೈರಲ್
ಸಚಿವ ಮಾಧುಸ್ವಾಮಿ ಹೇಳಿಕೆ ವಿಡಿಯೋ
ಇತ್ತೀಚೆಗೆ ನಡೆದ ಶಾಂತಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಮಾತನಾಡುತ್ತಾ, ಈ ವಿಚಾರದಲ್ಲಿ ಸ್ವತಃ ಸಿದ್ದಗಂಗಾ ಶ್ರೀಗಳೇ ಬಂದು ನನ್ನ ಹೆಸರಿಡು ಎಂದು ಹೇಳಿದರೂ ನಾನು ಒಪ್ಪಲ್ಲ. ಕಾನೂನು ಬದ್ದವಾಗಿ ಆಡಳಿತ ಮಾಡಲ ಅವಕಾಶ ಕೊಡಬೇಕು ಎಂದು ಸಚಿವರು ಹೇಳಿದ್ದಾರೆ.
ಈ ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಮಾಜಿ ಶಾಸಕ ಸುರೇಶ್ ಬಾಬು ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ವಂಶಿ ಕೃಷ್ಣ ಹಾಜರಿದ್ದರು.