ಕರ್ನಾಟಕ

karnataka

ETV Bharat / city

ಕುಣಿಗಲ್​ನಲ್ಲಿ ಜಲಾಶಯ ನೋಡಲು ಹೋಗಿದ್ದ ಇಬ್ಬರು ನೀರು ಪಾಲು

ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯ ನೋಡಲು ಬಂದಿದ್ದ ನಾಲ್ವರು ಯುವಕರ ಪೈಕಿ ಇಬ್ಬರು ಕೋಡಿ ಹಳ್ಳಕ್ಕೆ ಬಿದ್ದು, ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

markonahalli-reservoir
ಮಾರ್ಕೋನಹಳ್ಳಿ ಜಲಾಶಯ

By

Published : Nov 29, 2021, 2:22 PM IST

ತುಮಕೂರು:ನೀರಿನಲ್ಲಿ ಆಟವಾಡಲು ಹೋದ ನಾಲ್ವರ ಪೈಕಿ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ಕೋಡಿ ಹಳ್ಳದಲ್ಲಿ ಸಂಭವಿಸಿದೆ.

ಮಾರ್ಕೋನಹಳ್ಳಿ ಜಲಾಶಯ ನೋಡಲು ಹೋಗಿದ್ದ ಇಬ್ಬರು ನೀರು ಪಾಲು

ಮೃತರನ್ನು ಕುಣಿಗಲ್ ತಾಲೂಕಿನ ಬೀರಗಾನಹಳ್ಳಿ ಗ್ರಾಮದ ರಾಜು (23), ಅಪ್ಪು (20) ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಳೆಯಾಗಿದ್ದು, ಮಾಕೋರ್ನಹಳ್ಳಿ ಜಲಾಶಯವು ತುಂಬಿಹರಿಯುತ್ತಿದೆ. ಅಲ್ಲದೇ ಜಲಾಶಯದ ಕೋಡಿ ಬಿದ್ದಿರುವ ಜಾಗದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಟವಾಡಲು ಬರುತ್ತಿದ್ದಾರೆ. ಅದೇ ರೀತಿ ಭಾನುವಾರ ರಜೆ ಇದ್ದ ಕಾರಣ ಕುಣಿಗಲ್ ತಾಲೂಕಿನ ವಿವಿಧೆಡೆಯಿಂದ ಮಾರ್ಕೋನಹಳ್ಳಿ ಬಲಭಾಗದ ಕೋಡಿ ಹಳ್ಳದಲ್ಲಿ ಆಟವಾಡಲು ಜನರ ದಂಡೇ ನೆರೆದಿತ್ತು.

ಮಾರ್ಕೋನಹಳ್ಳಿ ಜಲಾಶಯ ಯುವಕರ ಸಾವು: ಈ ನಡುವೆ ಆಟವಾಡುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವಕರು ಧಿಡೀರನೇ ಮಾರ್ಕೋನಹಳ್ಳಿ ಜಲಾಶಯಕ್ಕೆ ಬಿದ್ದಿದ್ದರು. ಎರಡು ಸಾವಿರ ಕ್ಯೂಸೆಕ್​ ಒಳ ಹರಿವು ಹೆಚ್ಚಾದ ಹಿನ್ನೆಲೆ ಕೋಡಿ ಸೈಪೋನ್​ನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು.

ಕಾರಣ ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಯುವಕರನ್ನು ಪಾರು ಮಾಡಲು ಸ್ಥಳದಲ್ಲಿದ್ದವರಿಗೆ ಸಾಧ್ಯವೇ ಆಗಿಲ್ಲ. ಇದೇ ಸಂದಂರ್ಭದಲ್ಲಿ ಇನ್ನೊಂದೆಡೆ ನೀರಿನಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕ ತಬ್ರೇಜ್ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ. ತಕ್ಷಣ ಜಾಗೃತರಾದ ಕುಟುಂಬಸ್ಥರು ಆತನನ್ನು ಎಳೆದು ಪಾರು ಮಾಡಿದ್ದಾರೆ.

ಘಟನೆ ಕುಣಿಗಲ್ ಹಾಗೂ ನಾಗಮಂಗಲ ತಾಲೂಕಿನ ಗಡಿಭಾಗದಲ್ಲಿ ಜರುಗಿದ್ದು, ಈ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ತಿಳಿಸಿದ್ದಾರೆ.

ABOUT THE AUTHOR

...view details