ತುಮಕೂರು:ಹಳೇ ದ್ವೇಷ ಮತ್ತು ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರ ಮೇಲೆ ಟಾಟಾ ಏಸ್ ವಾಹನ ಹತ್ತಿಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆಯಲ್ಲಿ ನಡೆದಿದೆ.
ತುಮಕೂರಲ್ಲಿ ದ್ವೇಷಾಗ್ನಿ.. ಟಾಟಾ ಏಸ್ ಹತ್ತಿಸಿ ಇಬ್ಬರ ಬರ್ಬರ ಕೊಲೆ - old revenge
ಹಂದನಕೆರೆಯ ಅಶೋಕ್ ಮತ್ತು ಸೋಮಶೇಖರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ದುಷ್ಕರ್ಮಿಗಳು ಟಾಟಾ ಏಸ್ ವಾಹನದಿಂದ ಗುದ್ದಿ ಅವರ ಮೇಲೆ ಹತ್ತಿಸಿದ್ದಾರೆ. ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾರೆ.
ಟಾಟಾ ಏಸ್ ಹತ್ತಿಸಿ ಇಬ್ಬರ ಕೊಲೆ
ಹಂದನಕೆರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶೋಕ್(46), ಸೋಮಶೇಖರ್ ಮೃತಪಟ್ಟವರು. ಹಂದನಕೆರೆಯ ಅಶೋಕ್ ಮತ್ತು ಸೋಮಶೇಖರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ದುಷ್ಕರ್ಮಿಗಳು ಟಾಟಾ ಏಸ್ ವಾಹನದಿಂದ ಗುದ್ದಿ ಅವರ ಮೇಲೆ ಹತ್ತಿಸಿದ್ದಾರೆ. ಪರಿಣಾಮ ಅಶೋಕ್ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಸೋಮಶೇಖರ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಈ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.