ತುಮಕೂರು:ವಿದ್ಯಾರ್ಥಿ ಶಾಲೆಗೆ ಬಾರದ್ದನ್ನು ವಿಚಾರಿಸಲು ತೆರಳಿದ್ದ ಶಿಕ್ಷಕನ ಮೇಲೆಯೇ ಸ್ಥಳೀಯರಿಬ್ಬರು ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಸಬಾ ಹೋಬಳಿಯ ಲಾಳಾಪುರ ಗ್ರಾಮದಲ್ಲಿ ನಡೆದಿದೆ. ಕುಣಿಗಲ್ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಜಿ.ಆರ್. ನಾಗರಾಜ್ ಹಲ್ಲೆಗೊಳಗಾದವರು. ಮದ್ಯಪಾನ ಮಾಡಿದ್ದ ಇಬ್ಬರು ಶಿಕ್ಷಕರ ಹಲ್ಲೆ ಮಾಡಿದ್ದಾರೆ.
ಅನೇಕ ದಿನಗಳಿಂದ ಲಾಳಾಪುರ ಕಾಲೋನಿಯ ವಿದ್ಯಾರ್ಥಿ ಸೋಮಶೇಖರ್ ಶಾಲೆಗೆ ಬಾರದೇ ಗೈರಾಗಿದ್ದ. ಹೀಗಾಗಿ ವಿದ್ಯಾರ್ಥಿಯನ್ನು ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ತಿಳಿ ಹೇಳಲು ಶಿಕ್ಷಕ ನಾಗರಾಜ್ ತೆರಳಿದ್ದರು. ಅಲ್ಲದೇ ಪೋಷಕರ ಬಳಿ ಮಾತನಾಡುತ್ತಿದ್ದ ವೇಳೆ, ಸಮೀಪದಲ್ಲೆ ಕುಳಿತಿದ್ದ ಪ್ರಸಾದ್ ಎಂಬ ವ್ಯಕ್ತಿಯೊಬ್ಬ ಬಂದು ನಮ್ಮ ಮಕ್ಕಳನ್ನು ಯಾಕೆ ವಿಚಾರಿಸುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು.