ತುಮಕೂರು:ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಎಲ್ಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಳೆ ಆರ್ಭಟಕ್ಕೆ ಈವರೆಗೆ ಇಬ್ಬರು ಸಾವನಪ್ಪಿದ್ದಾರೆ. ಶಿರಾ ತಾಲೂಕಿನಲ್ಲಿ ಓರ್ವ ಶಿಕ್ಷಕ ಹಳ್ಳದಾಟಲು ಹೋಗಿ ಮೃತಪಟ್ಟಿದ್ದರೆ, ತುಮಕೂರು ನಗರದಲ್ಲಿ ವೃದ್ಧರೊಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನಪ್ಪಿದ್ದಾರೆ.
ಹಲವು ಗ್ರಾಮಗಳ ಸಂಪರ್ಕ ಕಡಿತ:ಕೊರಟಗೆರೆ, ಮಧುಗಿರಿ, ಶಿರಾ, ತುಮಕೂರು ತಾಲೂಕಿನ ಭಾಗದಲ್ಲಿ ಹರಿಯುವ ಜಯಮಂಗಲಿ ಹಾಗೂ ಸುವರ್ಣಮುಖಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಶಿರಾ, ಚಿಕ್ಕನಾಯಕನಹಳ್ಳಿ, ತುಮಕೂರು, ಗುಬ್ಬಿ ತುರುವೇಕೆರೆ ಕೊರಟಗೆರೆ ಮಧುಗಿರಿ ತಾಲೂಕಿನ ವ್ಯಾಪ್ತಿಯಲ್ಲಿರುವ ಬಹುತೇಕ ಎಲ್ಲಾ ಕೆರೆಗಳು ತುಂಬಿ ಕೊಡಿ ಬಿದ್ದಿವೆ. ಎಲ್ಲಾ ಹಳ್ಳ ಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿರುವ ಪರಿಣಾಮ ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.