ತುಮಕೂರು: ಅಕ್ಕ- ತಂಗಿಯರು ದಾರುಣವಾಗಿ ಸಾವನ್ನಪ್ಪಿರುವ ಇರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಬಳಿಯ ವರಣಸಂದ್ರದಲ್ಲಿ ನಡೆದಿದೆ. ಕವನ (7), ಯೋಕ್ಷಿತಾ (3) ಮೃತ ಅಕ್ಕ- ತಂಗಿಯರಾಗಿದ್ದಾರೆ.
ತಾಯಿ ಮಂಜುಳಾ ನಿನ್ನೆ ನೀರಿನ ಕಟ್ಟೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಕವನ, ಯೋಕ್ಷಿತಾ ಆಟವಾಡಲು ಹೋಗಿ ಕಾಲು ಜಾರಿ ಬಿದ್ದಿದ್ದಾರೆ. ಮಕ್ಕಳನ್ನ ಕಾಪಾಡಲು ತಾಯಿ ಸಹ ನೀರಿನ ಕಟ್ಟೆಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಮಂಜುಳಾನನ್ನು ಬಚಾವ್ ಮಾಡಿದ್ದಾರೆ.