ತುಮಕೂರು: ಮಹಿಳೆಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಇಬ್ಬರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ತುರುವೇಕೆರೆಯಲ್ಲಿ ನಡೆದಿದೆ. ಮಹಿಳೆಯಿಂದ ಸರ ಕದ್ದು ತಪ್ಪಿಸಿಕೊಳ್ಳಲು ದಾರಿ ದೋಚದ ಕಾರಣ ಅಡಕೆ ತೋಟಕ್ಕೆ ನುಗ್ಗಿದ್ದಾರೆ. ಈ ವೇಳೆ ಬೈಕ್ ಮಣ್ಣಿನಲ್ಲಿ ಸಿಲುಕಿದ್ದು, ಮುಂದೆ ತೆರಳಲಾರದೇ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮಹಿಳೆಗೆ ಖಾರದಪುಡಿ ಎರಚಿ ಮಾಂಗಲ್ಯಸರ ಕದಿಯಲು ಯತ್ನ: ಸರಗಳ್ಳರನ್ನು ಹಿಡಿದು ಥಳಿಸಿದ ಗ್ರಾಮಸ್ಥರು! - two chain snatchers arrested in tumkur
ಮಹಿಳೆಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಗೆ ಖಾರದಪುಡಿ ಎರಚಿ ಮಾಂಗಲ್ಯಸರ ಕದಿಯಲು ಯತ್ನ
ಹಾಲು ಗೊಂಡನಹಳ್ಳಿ ಗ್ರಾಮದ ಸುಜಾತಾ ಎಂಬುವವರು ತೋಟಕ್ಕೆ ತೆರಳುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಯುವಕರು ಮಹಿಳೆಗೆ ಖಾರದಪುಡಿ ಎರಚಿ ಬಲವಂತವಾಗಿ ಮಾಂಗಲ್ಯಸರ ಕದ್ದು ಪರಾರಿಯಾಗುತ್ತಿದ್ದರು. ಈ ವೇಳೆ, ಮಹಿಳೆ ಜೋರಾಗಿ ಕಿರುಚಿದ್ದಾಳೆ. ಮಹಿಳೆಯ ಚೀರಾಟ ಕೇಳಿದ ಸ್ಥಳೀಯರು ಕಳ್ಳರನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಧಿತರನ್ನು ಚನ್ನರಾಯ ಪಟ್ಟಣ ತಾಲೂಕಿನ ದಿಡಗ ಗ್ರಾಮದ ಯೋಗೀಶ್ ಮತ್ತು ರಾಕೇಶ್ ಎಂದು ಗುರುತಿಸಲಾಗಿದೆ.