ತುಮಕೂರು: ಮಾರ್ಚ್ 27ರಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಸಿರಾ ಪಟ್ಟಣದ ರೋಗಿ ನಂ. 60ರ ಸಂಬಂಧಿಕರಾದ 31 ಮಂದಿಯನ್ನು ಐಸೋಷೇಷನ್ನಿಂದ ಮನೆಗಳಿಗೆ ಕಳುಹಿಸಲಾಗಿದೆ. ಆಂಬ್ಯುಲೆನ್ಸ್ ನಲ್ಲಿ ಮನೆಗೆ ಬಂದು ಇಳಿಯುತ್ತಿದ್ದಂತೆ ಬಡಾವಣೆಯ ನಾಗರಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಕೊರೊನಾ ಸೋಂಕಿತನೊಂದಿಗೆ ಸಂಪರ್ಕದಲ್ಲಿದ್ದ 31 ಜನರ ಬಿಡುಗಡೆ: ಸಿರಾದಲ್ಲಿ ಚಪ್ಪಾಳೆ ತಟ್ಟಿ ಬರಮಾಡಿಕೊಂಡ ಜನ - ಕೊರೊನಾ ವೈರಸ್
ಸೋಂಕಿತ ರೋಗಿ-60ರ ಸಂಪರ್ಕದಲ್ಲಿದ್ದ ಹೆಂಡತಿ, ಮಗ ಹಾಗೂ ಸಂಬಂಧಿಕರು ಸೇರಿ 31 ಜನರಿಗೆ ಕೋವಿಡ್-19 ನೆಗೆಟಿವ್ ಬಂದ ಹಿನ್ನೆಲೆ ಅವರನ್ನು ಮರಳಿ ಮನೆಗೆ ಕಳುಹಿಸಲಾಗಿದೆ. ಯಶಸ್ವಿಯಾಗಿ ಕ್ವಾರಂಟೈನ್ ಮುಗಿಸಿಕೊಂಡು ಬಂದವರನ್ನು ಸಾರ್ವಜನಿಕರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.
ಮೃತ ರೋಗಿ-60 ದೆಹಲಿಯ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅಲ್ಲದೆ ಸೋಂಕು ತಗುಲಿದ್ದ ರೋಗಿ- 60ರ ಮಗ 13 ವರ್ಷದ ಬಾಲಕ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ ಮತ್ತು ನಿರಂತರ ನಿಗಾದಲ್ಲಿದ್ದ ರೋಗಿಯ ಪತ್ನಿಗೂ ಕೋವಿಡ್ -19 ನೆಗೆಟಿವ್ ಬಂದಿದೆ.
ಹೀಗಾಗಿ ಬಾಲಕ ಮತ್ತು ಆತನ ತಾಯಿ ಸೇರಿದಂತೆ ಒಟ್ಟು 31 ಮಂದಿಯನ್ನು ಅವರವರ ಮನೆಗಳಿಗೆ ಕಳುಹಿಸಿಕೊಡಲಾಯಿತು. ಬಾಲಕನ ತಾಯಿ ಸೇರಿ ಸಿರಾ ಆಸ್ಪತ್ರೆಯ ಐಸೊಲೇಷನ್ನಲ್ಲಿ 20 ಮಂದಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ವಾರ್ಡ್ನಲ್ಲಿ 10 ಮಂದಿ ನಿಗಾದಲ್ಲಿದ್ದರು. ಅಲ್ಲದೆ ಮುಂಜಾಗೃತೆಗಾಗಿ 15 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ.