ಕರ್ನಾಟಕ

karnataka

ETV Bharat / city

ಕೊರೊನಾ 'ಅಂತರ' ಮರೆತು ಕೆರೆ ಮೀನು ಖರೀದಿಗೆ ಮುಗಿಬಿದ್ದ ನಾಡಾಳುಗಳು

ಲಾಕ್​ಡೌನ್​ ಸಡಿಲಿಕೆ ಆದದ್ದೇ ತಡ ತುಮಕೂರು ಜನರು ಕೊರೊನಾ ಭೀತಿಯನ್ನು ಮರೆತಂತಿದೆ. ಜಿಲ್ಲೆಯ ತುರುವೇಕರೆ ತಾಲೂಕಿನ ಮಾಯಸಂದ್ರದಲ್ಲಿ ಸಾಮಾಜಿಕ ಅಂತರ ಕಳಚಿ ಜನರ ನಿರ್ಭಯವಾಗಿ ಮೀನು ಖರೀದಿಗೆ ಮುಗಿಬಿದ್ದ ದೃಶ್ಯಗಳು ಕಂಡು ಬಂದವು.

tumkuru-lock-down-fish-selling
ತುಮಕೂರು ಲಾಕ್​ಡೌನ್

By

Published : Apr 28, 2020, 2:45 PM IST

ತುಮಕೂರು:ಕೊರೊನಾ ಭೀತಿಯ ನಡುವೆಯೂ ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದ ಕೆರೆಯಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದು, ಮೀನು ಖರೀದಿಗೆ ಬಂದ ಜನ ಅಂತರ ಮರೆತು ದುರಂತಕ್ಕೆ ಎಡೆಮಾಡಿಕೊಳ್ಳುತ್ತಿದ್ದಾರೆ.

ಮೀನು ಖರೀದಿಗೆ ಮುಗಿಬಿದ್ದ ಜನ

ಇನ್ನೊಂದೆಡೆ ಸಾರ್ವಜನಿಕರು ಮೀನಿಗಾಗಿ ಕಿತ್ತಾಟ ನಡೆಸಿದ್ದು, ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೆ, ಗುಂಪುಗುಂಪಾಗಿ ನಿಂತು ಕೆರೆ ಸಮೀಪ ಮೀನು ಖರೀದಿಯಲ್ಲಿ ತೊಡಗಿದ್ದರು. ಮುಂಜಾನೆ 7 ಗಂಟೆಯಿಂದ ಆರಂಭವಾದ ಮೀನಿನ ವ್ಯಾಪಾರ ಬೆಳಗ್ಗೆ 9 ಗಂಟೆಯವರೆಗೂ ನಡೆಯಿತು. ಜನರಲ್ಲಿ ಕೋವಿಡ್-19 ಭಯ ಇಲ್ಲದಿರುವುದು ಸ್ಪಷ್ಟವಾಗಿತ್ತು.

ABOUT THE AUTHOR

...view details