ತುಮಕೂರು: ಕೋವಿಡ್ ಅಬ್ಬರದ ನಡುವೆ ಆರ್ಥಿಕವಾಗಿ ನಲುಗಿರುವ ಆರ್ಕೆಸ್ಟ್ರಾ ಕಲಾವಿದರಿಗೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ನೆರವಾಗಿದ್ದಾರೆ.
ಆರ್ಕೆಸ್ಟ್ರಾ ಕಲಾವಿದರಿಗೆ ಆರ್ಥಿಕ ನೆರವು ನೀಡಿದ ತುಮಕೂರು ಎಸ್ಪಿ - ತುಮಕೂರು
ತುಮಕೂರು ಎಸ್ಪಿ ರಾಹುಲ್ ಕುಮಾರ್ ಅವರು ಆರ್ಕೆಸ್ಟ್ರಾ ಕಲಾವಿದರಿಗೆ ಆರ್ಥಿಕ ನೆರವು ನೀಡಿದರು.
ಆರ್ಕೆಸ್ಟ್ರಾ ಕಲಾವಿದರ ಆರ್ಥಿಕ ನೆರವು ನೀಡಿದ ತುಮಕೂರು ಎಸ್ಪಿ
ಕರ್ನಾಟಕ ಜಿಲ್ಲಾ ವಾದ್ಯಗೋಷ್ಠಿ ಕಲಾವಿದರ ಸಂಘದಿಂದ ನಿನ್ನೆ (ಶನಿವಾರ) ರಾತ್ರಿ ತುಮಕೂರು ನಗರದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಅವರು, ಕಲಾವಿದರ ಸಂಘಕ್ಕೆ 20 ಸಾವಿರ ರೂ.ಗಳನ್ನು ವೈಯಕ್ತಿಕವಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್ಪಿ ರಾಹುಲ್ ಕುಮಾರ್, ಕಳೆದ 2 ವರ್ಷದಿಂದ ಕೊರೊನಾ ಸಂಕಷ್ಟದಲ್ಲಿರುವ ಕಲಾವಿದರಿಗೆ ನಾನು ಈ ಚಿಕ್ಕ ಕಾಣಿಕೆ ನೀಡುತ್ತಿದ್ದೇನೆ. ಕಲಾವಿದರ ಸಂಕಷ್ಟ ನೋಡಿ ನನಗೂ ಬೇಸರವಾಗಿದೆ. ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ ಎಂಬ ವಿಶ್ವಾಸವಿದೆ ಎಂದರು.