ತುಮಕೂರು:ನಗರದಲ್ಲಿ ವ್ಯಾಕ್ಸಿನ್ ನೀಡಿಕೆ ಪ್ರಕ್ರಿಯೆ ಬಿರುಸುಗೊಂಡಿದ್ದು, ಇದೀಗ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ವಾರು ವ್ಯಾಕ್ಸಿನ್ ನೀಡಿಕೆ ಆರಂಭಗೊಂಡಿದೆ.
ಓದಿ: ಕುಸಿದ ರಸ್ತೆಯೊಳಗೆ ಬಿದ್ದ ಚಲಿಸುತ್ತಿದ್ದ ಟ್ರಕ್ - ವಿಡಿಯೋ ನೋಡಿ

ಇದುವರೆಗೂ ತುಮಕೂರು ಜಿಲ್ಲಾ ಆಸ್ಪತ್ರೆ ಹಾಗೂ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಮಾತ್ರ 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲಾಗುತ್ತಿತ್ತು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು ಕೂಡ ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆ ಹಿರಿಯ ನಾಗರಿಕರು ಅಲ್ಲಿಗೆ ತೆರಳಲು ಕಷ್ಟ ಸಾಧ್ಯವಾಗುತ್ತಿತ್ತು. ಅಲ್ಲದೆ ಸೀಮಿತ ಸಂಖ್ಯೆಯ ವ್ಯಾಕ್ಸಿನ್ಗಳನ್ನು ಮಾತ್ರ ನೀಡಲಾಗುತ್ತಿತ್ತು.
ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು. ಸರದಿ ಸಾಲಿನಲ್ಲಿ ನಿಂತು ವ್ಯಾಕ್ಸಿನ್ ಸಿಗದೆ ವಾಪಸ್ ಮರಳುತ್ತಿದ್ದರು. ಹೀಗಾಗಿ ಇದನ್ನು ಮನಗಂಡ ಸ್ಥಳೀಯ ಜಿಲ್ಲಾಡಳಿತ ವಾರ್ಡ್ವಾರು ವ್ಯಾಕ್ಸಿನ್ ನೀಡಲು ನಿರ್ಧರಿಸಿ ಪ್ರತೀ ವಾರ್ಡಿನಲ್ಲಿ ಕನಿಷ್ಠ ಎರಡು ದಿನ ಸ್ಥಳದಲ್ಲಿಯೇ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಿಕೊಂಡಿದೆ. ಅದರಂತೆ ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಸಾರ್ವಜನಿಕರಿಂದ ಆಧಾರ್ ಕಾರ್ಡ್ ಪಡೆದು ಅಲ್ಲಿಯೇ ಮೊಬೈಲ್ನಲ್ಲಿ ಅಪ್ಡೇಟ್ ಮಾಡಿ ವ್ಯಾಕ್ಸಿನ್ ನೀಡುತ್ತಿದ್ದಾರೆ.
ಇದರಿಂದಾಗಿ ಸಾರ್ವಜನಿಕರಿಗೆ ತುಮಕೂರು ನಗರದಲ್ಲಿ ವ್ಯಾಕ್ಸಿನ್ ಸಿಗಲಿಲ್ಲ ಎಂಬ ಅಸಮಾಧಾನ ಕಡಿಮೆಯಾಗಿದೆ. ಇನ್ನು ಕೇವಲ ಎರಡು ದಿನ ಮಾತ್ರ ಪ್ರತೀ ವಾರ್ಡಿನಲ್ಲಿ ವ್ಯಾಕ್ಸಿನ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.