ಕರ್ನಾಟಕ

karnataka

ETV Bharat / city

ಸಿಡಿ ಪ್ರಕರಣದ ಹಿಂದೆ ಯಾವ ಪಕ್ಷದವರಿದ್ದಾರೆ ಗೊತ್ತಿಲ್ಲ; ಸಂಸದ ಬಸವರಾಜ - ramesh jarakiholi cd case

ರಮೇಶ್ ಜಾರಕಿಹೊಳಿ ಬದ್ಧತೆಯಿರುವ ಸಚಿವರಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಸಿಡಿ ಪ್ರಕರಣದಲ್ಲಿ ಯಾವ ಪಕ್ಷದವರು ಸೇರಿದ್ದಾರೆ ಎಂಬುದು ಹೇಳಲು ಆಗುತ್ತಿಲ್ಲ. ಈ ಕೃತ್ಯ ಉದ್ದೇಶಪೂರ್ವಕವಾಗಿ ನಡೆದಿದೆ ಎಂದು ತುಮಕೂರು ಸಂಸದ ಬಸವರಾಜ್ ಆರೋಪಿಸಿದ್ದಾರೆ.

Tumkur MP Basavaraj
ತುಮಕೂರು ಸಂಸದ ಬಸವರಾಜ್

By

Published : Mar 14, 2021, 2:20 PM IST

ತುಮಕೂರು:ಕುಚೋದ್ಯರು, ಅವಿವೇಕಿಗಳು ಸೇರಿ ರಮೇಶ್ ಜಾರಕಿಹೊಳಿ ಅವರನ್ನು ಮೂಲೆಗುಂಪು ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ತುಮಕೂರು ಸಂಸದ ಬಸವರಾಜ ಆರೋಪಿಸಿದ್ದಾರೆ.

ತುಮಕೂರು ಸಂಸದ ಬಸವರಾಜ ಸುದ್ದಿಗೋಷ್ಠಿ

ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಈಗಾಗಲೇ ಎಸ್ಐಟಿ ತನಿಖೆ ನಡೆಯುತ್ತಿದೆ. ಅನೇಕ ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೊಂದು ವಾರದಲ್ಲಿ ಸಂಪೂರ್ಣ ಚಿತ್ರಣ ಹೊರಬರಬಹುದು. ಒಂದೆಡೆ ತಲೆಮರೆಸಿಕೊಂಡಿರುವ ಯುವತಿಯಿಂದ ಹೇಳಿಕೆ ಕೊಡಿಸುತ್ತಿದ್ದಾರೆ. ಇದು ಉದ್ದೇಶಪೂರ್ವವಾಗಿ ಮಾಡಿರುವಂತದ್ದು ಎಂದರು.

ಓದಿ:ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿ ಇಲ್ಲ

ರಮೇಶ್ ಜಾರಕಿಹೊಳಿ ಬದ್ಧತೆಯಿರುವ ಸಚಿವರಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಇದರಲ್ಲಿ ಯಾವ ಪಕ್ಷದವರು ಸೇರಿದ್ದಾರೆ ಎಂಬುದು ಹೇಳಲು ಆಗುತ್ತಿಲ್ಲ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದರು.

ABOUT THE AUTHOR

...view details