ತುಮಕೂರು:ನಾಳೆ ನಡೆಯಲಿರುವ ಭಾರತ್ ಬಂದ್‌ಗೆ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ ಸಂಘ, ಹಸಿರು ಸೇನೆ, ಕೃಷಿಕ ಸಮಾಜ ಹಾಗೂ ರೈತಪರ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.
ಅದೇ ರೀತಿ ಎಐಟಿಯುಸಿ, ಸಿಐಟಿಯು, ಸಿಪಿಐಎಂ ಹಾಗೂ ಕಾರ್ಮಿಕ ಸಂಘಟನೆಗಳು, ಕರವೇ, ಜಯ ಕರ್ನಾಟಕ, ಕನ್ನಡಪರ ಸಂಘಟನೆಗಳು, ಡಿಎಸ್ಎಸ್ ಹಾಗೂ ದಲಿತ ಪರ ಸಂಘಟನೆಗಳು, ಎನ್ಎಫ್ಐಡಬ್ಲೂ, ಜನವಾದಿ ಮಹಿಳಾ ಸಂಘಟನೆ, ಎಎಸ್ಎಫ್ , ಎಐಡಿಎಫ್ಓ, ಕೋಳಗೇರಿ ಸಂಘಟನೆಗಳು ಕೂಡ ಬೆಂಬಲ ಸೂಚಿಸಿವೆ.