ಕರ್ನಾಟಕ

karnataka

ETV Bharat / city

ಸೇಡು.. ಬಾಲಕಿಯನ್ನ ಅಪಹರಿಸಿ 15 ದಿನಗಳ ಕಾಲ ಅತ್ಯಾಚಾರ ಮಾಡಿದ ಪಾಪಿ! - ತುಮಕೂರು ಬಾಲಕಿ ಮೇಲೆ ಅತ್ಯಾಚಾರ

ಸೇಡು ತೀರಿಸಿಕೊಳ್ಳಲು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನುತುಮಕೂರು ಪೊಲೀಸರು ಬಂಧಿಸಿದ್ದಾರೆ

rape
rape

By

Published : Jun 12, 2021, 5:17 PM IST

Updated : Jun 12, 2021, 6:13 PM IST


ತುಮಕೂರು:ಬಾಲಕಿಯನ್ನು ಅಪಹರಿಸಿ 15 ದಿನಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಮಿಡಿಗೇಶಿ ಪೊಲೀಸರು ಬಂಧಿಸಿ, ಆತನ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಮಧುಗಿರಿ ತಾಲೂಕಿನ 16 ವರ್ಷದ ಬಾಲಕಿ ಮೇಲೆ 22 ವರ್ಷದ ಉಗ್ರಪ್ಪ ಎಂಬಾತ ಅತ್ಯಾಚಾರ ಎಸಗಿರುವ ಆರೋಪ ಸಂಬಂಧ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.


ಆರೋಪಿ ಅನುಚಿತವಾಗಿ ವರ್ತಿಸಿದ್ದ ಬಾಲಕಿ ಅವನ ಕೆನ್ನೆಗೆ ಹೊಡೆದಿದ್ದಳು. ಇದಕ್ಕೆ ಸೇಡು ತೀರಿಸಿಕೊಳ್ಳಲು ಆರೋಪಿಯು ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಆರೋಪಿಯು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಬಾಡಿಗೆ ಮನೆ ಮಾಡಿ, ಬಾಲಕಿಯನ್ನು ಅಲ್ಲೇ ಗೃಹಬಂಧನದಲ್ಲಿರಿಸಿ 15 ದಿನಗಳ ಕಾಲ ಅತ್ಯಾಚಾರ ಎಸಗಿದ್ದ. ನಂತರ ಬಾಲಕಿಯನ್ನು ಮಡಕಶಿರಾ ಪಟ್ಟಣಕ್ಕೆ ಕರೆತಂದು ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಜೂನ್ 8ರಂದು ಬಾಲಕಿ ಮಿಡಿಗೇಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Last Updated : Jun 12, 2021, 6:13 PM IST

ABOUT THE AUTHOR

...view details