ತುಮಕೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಮಹಾನಗರ ಪಾಲಿಕೆ ಮೊಬೈಲ್ ಮಾಂಸ ಮಾರಾಟ ಮಳಿಗೆ ವ್ಯವಸ್ಥೆ ಮಾಡಿದೆ.
ಮಾಂಸ ಪ್ರಿಯರಿಗೆ ಸಿಹಿ ಸುದ್ದಿ: ತುಮಕೂರಲ್ಲಿ ಮನೆ ಬಾಗಿಲಿಗೆ ಬರಲಿದೆ ಸಂಚಾರಿ ಮಾರಾಟ ಮಳಿಗೆ! - ತುಮಕೂರು ಮಾಂಸ ಪ್ರಿಯರಿಗೆ ಸಿಹಿ ಸುದ್ದಿ
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಪ್ರತಿ ಭಾನುವಾರ ಮತ್ತು ಮಂಗಳವಾರದಂದು ನಗರದ ವಿವಿಧ ಬಡಾವಣೆಗಳಲ್ಲಿ ಮಾಂಸ ಮಾರಾಟ ಮಳಿಗೆ ಸಂಚರಿಸಲಿದೆ.
ತುಮಕೂರು ಮಾಂಸ ಪ್ರಿಯರಿಗೆ ಸಿಹಿ ಸುದ್ದಿ, ಮನೆ ಬಾಗಿಲಿಗೆ ಬರಲಿದೆ ಸಂಚಾರಿ ಮಾರಾಟ ಮಳಿಗೆ..!
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಪ್ರತಿ ಭಾನುವಾರ ಮತ್ತು ಮಂಗಳವಾರದಂದು ನಗರದ ವಿವಿಧ ಬಡಾವಣೆಗಳಲ್ಲಿ ಮಾಂಸ ಮಾರಾಟ ಮಳಿಗೆ ಸಂಚರಿಸಲಿದೆ. ಸ್ಥಳದಲ್ಲೇ ಗ್ರಾಹಕರಿಗೆ ಸ್ವಚ್ಛತೆಯೊಂದಿಗೆ ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ.
ಕೊರೊನಾ ಭೀತಿ ಸಂದರ್ಭದಲ್ಲಿಯೂ ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ತೆಗೆದುಕೊಂಡಿರುವ ನಿರ್ಧಾರ ಸಾಕಷ್ಟ ಪ್ರಶಂಸೆಗೆ ಒಳಗಾಗಿದೆ.