ಕರ್ನಾಟಕ

karnataka

ETV Bharat / city

9 ಕೋಟಿ ರೂ. ಮೌಲ್ಯದ ಕಳವಾಗಿದ್ದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ತುಮಕೂರು ಜಿಲ್ಲಾ ಪೊಲೀಸ್ - Tumkur District Police department Operations

ತುಮಕೂರು ಜಿಲ್ಲಾ ಪೊಲೀಸ್​ ಇಲಾಖೆ ಬರೋಬ್ಬರಿ 9 ಕೋಟಿ ರೂ. ಮೌಲ್ಯದ ಕಳವಾಗಿದ್ದ ವಸ್ತುಗಳನ್ನು ಪತ್ತೆಹಚ್ಚಿ ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ..

Tumkur District Police handed over the stolen items to owners
ಕಳವಾಗಿದ್ದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ತುಮಕೂರು ಜಿಲ್ಲಾ ಪೊಲೀಸ್

By

Published : Dec 8, 2021, 4:12 PM IST

ತುಮಕೂರು: ತುಮಕೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳವಾಗಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದದ್ದರು. ಬರೋಬ್ಬರಿ 9 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ತಲುಪಿಸಿದರು.

ಚಿನ್ನಾಭರಣ, ನಗದು, ವಾಹನಗಳು ಸೇರಿದಂತೆ ಸುಮಾರು 9 ಕೋಟಿ 47 ಲಕ್ಷದ 49 ಸಾವಿರದ 862 ರೂ. ಬೆಲೆ ಬಾಳುವ ಸ್ವತ್ತುಗಳನ್ನು ತುಮಕೂರು ಪೊಲೀಸರು ಕಳೆದೆರಡು ವರ್ಷಗಳಲ್ಲಿ ಕಾರ್ಯಾಚರನೆ ನಡೆಸಿ ವಶಕ್ಕೆ ಪಡೆದಿದ್ದರು. ಅವೆಲ್ಲವನ್ನು ಪೊಲೀಸರು ಆಯಾ ವಾರಸುದಾರರಿಗೆ ಒಪ್ಪಿಸಿದ್ದಾರೆ. ಕಳೆದುಕೊಂಡಿದ್ದ ವಸ್ತುಗಳನ್ನು ಪಡೆದ ಮಾಲೀಕರು ಅವನ್ನು ಕಂಡು ಭಾವುಕರಾದರು.

ಕಳವಾಗಿದ್ದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ತುಮಕೂರು ಜಿಲ್ಲಾ ಪೊಲೀಸ್

ತುಮಕೂರು ನಗರದ ಚಿಲುಮೆ ಪೊಲೀಸ್ ಸಭಾಂಗಣದಲ್ಲಿ ಸ್ವತ್ತುಗಳನ್ನ ಹಿಂದಿರುಗಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸ್ವತಃ ಕೇಂದ್ರ ವಲಯ ಐಜಿಪಿ ಎಂ ಚಂದ್ರಶೇಖರ್ ಕಾರ್ಯಕ್ರಮ ನಡೆಸಿಕೊಟ್ಟರು. ಈ ಎಲ್ಲ ಪ್ರಕರಣಗಳು ಕೋವಿಡ್ ಮೊದಲನೇ ಅಲೆ ಮತ್ತು ಎರಡನೇ ಅಲೆಯ ವೇಳೆ ನಡೆದದ್ದು. ಇಂದು ಎಲ್ಲವನ್ನೂ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇಂದು ಒಟ್ಟಾರೆ 11 ಕೆ.ಜಿ ಚಿನ್ನ, 17 ಕೆ.ಜಿ ಬೆಳ್ಳಿ, 147 ದ್ವಿಚಕ್ರ ವಾಹನ, 28 ಇತರ ವಾಹನ, 50 ಮೊಬೈಲ್​​ಗಳು, ಮತ್ತು 2 ಕೋಟಿ 36 ಲಕ್ಷದ 91 ಸಾವಿರದ 400 ರೂಪಾಯಿ ನಗದನ್ನು ಪೊಲೀಸರು ಆಯಾ ವಾರಸುದಾರರಿಗೆ ಹಿಂದಿರುಗಿಸಿದರು.

ಇದನ್ನೂ ಓದಿ:ಒಮಿಕ್ರಾನ್ ವಿಚಾರವಾಗಿ ಜನರಲ್ಲಿ ಅನಗತ್ಯ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ: ಡಿಕೆಶಿ

ABOUT THE AUTHOR

...view details