ತುಮಕೂರು:ನಗರದಲ್ಲಿ ನಿಧಾನವಾಗಿ ಎಲ್ಲಾ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಬರುತ್ತಿದ್ದು, ಬಹುತೇಕ ಅಂಗಡಿ-ಮುಂಗಟ್ಟಗಳು ತೆರೆದಿವೆ. ಲಾಕ್ಡೌನ್ನಲ್ಲಿ ಕಾಲಿಗೆ ಹಗ್ಗ ಕಟ್ಟಿಕೊಂಡಿದ್ದ ಜನರು, ನಿಧಾನವಾಗಿ ಹಗ್ಗ ಬಿಚ್ಚಿ ಹೊರಬರುತ್ತಿದ್ದಾರೆ. ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವಲ್ಲಿ ನಿರತರಾಗುತ್ತಿದ್ದಾರೆ.
ಸಹಜ ಸ್ಥಿತಿಗೆ ಮರಳುತ್ತಿದೆ ಕಲ್ಪತರು ನಾಡು ತುಮಕೂರು - tumkur district back to normal
ತುಮಕೂರು ಜಿಲ್ಲೆಯಲ್ಲಿ ಅನ್ಲಾಕ್ ನಂತರ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಸಾರ್ವಜನಿಕರು ಮಾಸ್ಕ್ ಧರಿಸಿಯೇ ಎಲ್ಲಾ ರೀತಿಯ ವ್ಯವಹಾರ ನಡೆಸುತ್ತಿದ್ದಾರೆ. ಆದರೆ, ಸಾಮಾಜಿಕ ಅಂತರ ತುಸು ಮಟ್ಟಿಗೆ ದೂರವಾಗಿರುತ್ತದೆ.
ಸಾರ್ವಜನಿಕರು ಸಹ ಮಾಸ್ಕ್ ಧರಿಸಿಯೇ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಆದರೆ, ಕೆಲವೆಡೆ ಸಾಮಾಜಿಕ ಅಂತರ ಮಾಯಾವಾಗಿರುತ್ತದೆ. ಕೋವಿಡ್ ಆರಂಭಕ್ಕೆ ಹೋಲಿಸಿದರೆ ಆರೋಗ್ಯ ಪ್ರಜ್ಞೆ ಈಗ ಕಡಿಮೆಯಾಗಿದೆ. ಸ್ವಲ್ಪಮಟ್ಟಿಗೆ ವ್ಯಾಪಾರ ವಹಿವಾಟು ಇಳಿಮುಖವಾಗಿದೆ.
ಇತ್ತ ಕಾರ್ಮಿಕರು ಸಹ ಹೊರ ರಾಜ್ಯದಿಂದ ವಿರಳ ಸಂಖ್ಯೆಯಲ್ಲಿ ಕೆಲಸ ಹರಸಿ ಬರುತ್ತಿದ್ದಾರೆ. ತುಮಕೂರು ಕೆಎಸ್ಆರ್ಟಿಸಿ ವಿಭಾಗಿಯ ನಿಯಂತ್ರಣದಲ್ಲಿ ನಿತ್ಯ 500 ಬಸ್ಗಳು ಓಡಾಡುತ್ತಿದೆ. ಆದರೆ, ಪ್ರಯಾಣಿಕರ ಓಡಾಟ ಗಣನೀಯವಾಗಿ ಕ್ಷೀಣಿಸಿದೆ. ಲಾಕ್ಡೌನ್ಗೂ ಮುನ್ನ 50 ಸಾವಿರ ಜನ ದಿನನಿತ್ಯ ಓಡಾಡುತ್ತಿದ್ದರು. ಈಗ ಕನಿಷ್ಠ 20 ಸಾವಿರ ಮಂದಿ ಮಾತ್ರ ಓಡಾಡುತ್ತಿದ್ದಾರೆ.