ತುಮಕೂರು:ಪಾಲಿಕೆ ಪರಿಸರದ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ತುಮಕೂರು ಮಹಾನಗರ ಪಾಲಿಕೆ, ತನ್ನ ವ್ಯಾಪ್ತಿಗೆ ಬರುವ ವಾರ್ಡ್ಗಳಿಗೆ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿ ಆಡಂಬರದ ಗಣೇಶ ನಿಮಜ್ಜನಕ್ಕೆ ಬ್ರೇಕ್ ಹಾಕಿದೆ.
ಆಡಂಬರದ ಗಣೇಶ ನಿಮಜ್ಜನಕ್ಕೆ ತುಮಕೂರು ಮಹಾನಗರ ಪಾಲಿಕೆ ಬ್ರೇಕ್ - extravagant Ganeshotsav
ಪರಿಸರದ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ತುಮಕೂರು ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಗೆ ಬರುವ 35 ವಾರ್ಡ್ಗಳಲ್ಲಿ ಅನೇಕ ನಿಯಮಗಳನ್ನು ಜಾರಿಗೊಳಿಸಿ, ಆಡಂಬರದ ಗಣೇಶ ನಿಮಜ್ಜನಕ್ಕೆ ಬ್ರೇಕ್ ಹಾಕಿದೆ.

ಹೌದು, ತುಮಕೂರು ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಗೆ ಬರುವ 35 ವಾರ್ಡ್ಗಳಲ್ಲಿಯೂ ಅನೇಕ ನಿಯಮಗಳನ್ನು ಜಾರಿಗೊಳಿದೆ. ಪಿಒಪಿ ಅಥವಾ ಬಣ್ಣ ಲೇಪಿತ ಗಣೇಶ ವಿಗ್ರಹಗಳ ನಿಷೇಧ, ಅನುಮತಿ ನೀಡಿದ ಸ್ಥಳದಲ್ಲಿ ಮಾತ್ರ ಗಣಪತಿ ಕೂರಿಸುವುದು, ಧ್ವನಿವರ್ಧಕಗಳನ್ನು ಬೆಳೆಸಬೇಕೆಂದರೆ ಪೊಲೀಸರ ಅನುಮತಿ ಪಡೆಯುವುದು, ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶ, ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆಯ ನಿಷೇಧ, ನಿಗದಿತ ಪ್ರದೇಶಗಳಲ್ಲಿ ಗಣಪತಿಯನ್ನು ನಿಮಜ್ಜನ ಹಾಗೂ ನಿಮಜ್ಜನ ಬಳಿಕ ಆ ಸ್ಥಳವನ್ನು ಗಣೇಶ ಕಮಿಟಿ ತನ್ನ ಸ್ವಂತ ಹಣದಲ್ಲಿ ಸ್ವಚ್ಛತೆಯನ್ನು ಮಾಡಿಸಬೇಕು ಎಂಬ ನಿಯಮಗಳನ್ನು ಹೇರಿ ಪರಿಸರ ರಕ್ಷಣೆಗೆ ಮುಂದಾಗಿದೆ.
ಬಟವಾಡಿಯ ಆಂಜನೇಯ ದೇವಸ್ಥಾನ, ಶೆಟ್ಟಿಹಳ್ಳಿ ರಸ್ತೆಯ ರಾಘವೇಂದ್ರ ಸ್ವಾಮಿ ಮಠದ ಬಳಿ ಸೇರಿದಂತೆ ನಗರದ ವಿವಿಧೆಡೆ ಚಿಕ್ಕ ಚಿಕ್ಕ ಗಣಪತಿಗಳ ನಿಮಜ್ಜನಕ್ಕೆ ಅವಕಾಶ ನೀಡಲಾಗಿದೆ. ಇನ್ನು ದೊಡ್ಡ ವಿಗ್ರಹಗಳ ನಿಮಜ್ಜನಕ್ಕೆಂದು ಹನುಮಂತಪುರ ಬಳಿ ಇರುವ ಬೆಳಗುಂಬ ಪ್ರದೇಶದಲ್ಲಿ ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗಿದೆ.