ತುಮಕೂರು: ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರ ಮತ್ತು ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ತುಮಕೂರು: ಆಟೋ, ಟ್ಯಾಕ್ಸಿ ಚಾಲಕರ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ - Tumkur News
ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರ ಮತ್ತು ಮಾಲೀಕರ ವಿವಿಧ ಕುಂದುಕೊರತೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಅವರಿಗೆ ಮನವಿ ಸಲ್ಲಿಸಲಾಯಿತು.

ಕೋವಿಡ್-19 ಹಿನ್ನೆಲೆಯಲ್ಲಿ ಬಾಡಿಗೆಗಳು ಸಿಗದ ಕಾರಣ ಚಾಲಕರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಹೀಗಾಗಿ ಇನ್ಶೂರೆನ್ಸ್ ಅವಧಿಯನ್ನು ಆರು ತಿಂಗಳವರೆಗೆ ಮುಂದುವರೆಸಬೇಕು. ಚಾಲಕರಿಗೆ ವಾಹನಗಳ ಸಾಲದ ಕಂತುಗಳನ್ನು ಕಟ್ಟುವ ಶಕ್ತಿ ಇರದ ಕಾರಣ, ವಿನಾಯಿತಿ ನೀಡುವ ಜೊತೆಗೆ ಈ ಅವಧಿಯ ಬಡ್ಡಿಗೆ ಸಂಪೂರ್ಣ ವಿನಾಯಿತಿ ನೀಡಬೇಕು. ನೀಡಿರುವ ಭರವಸೆಯಂತೆ ಕರ್ನಾಟಕ ಪರ್ಮಿಟ್-1 ಸೀಟಿಗೆ 300 ಕಡಿತಗೊಳಿಸಬೇಕು. ಆರ್ಟಿಒ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸುಮಾರು 7.50 ಸಾವಿರ ಜನ ಚಾಲಕರಿದ್ದು, ಅದರಲ್ಲಿ 2.50 ಸಾವಿರ ಚಾಲಕರು ಮಾತ್ರ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ರಾಜ್ಯಸರ್ಕಾರ ಕೇವಲ 1.20 ಸಾವಿರ ಚಾಲಕರಿಗೆ ಮಾತ್ರ ಸಹಾಯಧನ ನೀಡಿದೆ ಎಂದು ಆರೋಪಿಸಿದರು.