ಕರ್ನಾಟಕ

karnataka

ETV Bharat / city

ಸುರೇಶ್ ಕುಮಾರ್ ಅವರಿಂದ ಮೆಚ್ಚುಗೆ ಪಡೆದಿದ್ದ ಶಿಕ್ಷಕ ಇದೀಗ ದುರ್ವರ್ತನೆ ತೋರಿ ಅಮಾನತು - ತುಮಕೂರು

ಶಾಲೆಗೆ ಮದ್ಯ ಸೇವಿಸಿ ಬಂದಿರುವುದು, ಅವಾಚ್ಯ ಶಬ್ದಗಳಿಂದ ಸಹೋದ್ಯೋಗಿಗಳ ನಿಂದನೆ ಮುಂತಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತುಮಕೂರಿನ ಶಿಕ್ಷಕ ಅಮಾನತು ಆಗಿದ್ದಾರೆ.

suspended
ಅಮಾನತು

By

Published : Jul 19, 2022, 9:06 PM IST

ತುಮಕೂರು :ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಂದ ಶಿಕ್ಷಕನಾಗಿದ್ದುಕೊಂಡು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದ ಎಂದು ಶಬ್ಬಾಷ್ ಗಿರಿ ಪಡೆದಿದ್ದ ಟೀಚರ್​ ಅಮಾನತು ಆಗಿದ್ದಾನೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗೊಂಬೆಹಳ್ಳಿ ಸರ್ಕಾರಿ ಶಾಲೆಯ ಫಣೀಂದ್ರ ಮದ್ಯ ಸೇವಿಸಿ ಬಂದು ದುರ್ವರ್ತನೆಯಿಂದ ಅಮಾನತುಗೊಂಡ ಶಿಕ್ಷಕ.

ಸಚಿವರ ಶಬ್ಬಾಸ್ ಗಿರಿ ದೊರೆತ ಬಳಿಕ ವರ್ತನೆ ಬದಲಾಯಿಸಿಕೊಂಡಿದ್ದ ಫಣೀಂದ್ರ ಅನೇಕ ಕಾರಣಗಳನ್ನು ನೀಡಿ ಶಾಲೆಗೆ ಗೈರು ಹಾರ ಹಾಜರಾಗುತ್ತಿದ್ದರು. ಅಲ್ಲದೇ ನಿತ್ಯ ಮದ್ಯ ಸೇವಿಸಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಶಾಲೆಯ ಅನೇಕ ಶಿಕ್ಷಕರಿಗೆ ಚಪ್ಪಲಿ ತೋರಿಸಿ ಬೆದರಿಕೆ ಹಾಕುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಅನುಚಿತನೆ ವರ್ತನೆ. ಮುಖ್ಯ ಶಿಕ್ಷಕರಿಗೆ ಜಾತಿ ನಿಂದನೆ ಮಾಡಿ ಏಕವಚನದಲ್ಲಿ ಬೈದು ಅನುಚಿತ ವರ್ತನೆ ತೋರಿದ್ದು, ಆಂತರಿಕ ತನಿಖೆ ವೇಳೆ ಸಾಬೀತಾಗಿದೆ.

ಅಲ್ಲದೆ ಗೊಂದಿಹಳ್ಳಿ ಶಾಲೆಯ ಪೋಷಕರು ಸಹ ಶಿಕ್ಷಕನ ವಿರುದ್ಧ ಬಿಇಒಗೆ ದೂರು ನೀಡಲಾಗಿತ್ತು. ಗ್ರಾಮಸ್ಥರ ದೂರನ್ನು ಪರೀಶಿಲನೆ ನಡೆಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು. ತನಿಖೆಯಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಮಧುಗಿರಿ ಡಿ.ಡಿ.ಪಿ.ಐ ರೇವಣ್ಣ ಸಿದ್ದಪ್ಪರಿಂದ ಅಮಾನತು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ :ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ತೀರ್ಮಾನ: ಉದ್ಘಾಟಕರ ಆಯ್ಕೆ ಸಿಎಂ ಹೆಗಲಿಗೆ

For All Latest Updates

ABOUT THE AUTHOR

...view details