ತುಮಕೂರು: ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುತ್ತೇನೆ ಎಂದು ಹೇಳಿದ್ದ ಅರ್ಚಕ ಚಂದ್ರಶೇಖರ್, ಇದೀಗ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ತುಮಕೂರು ತಾಲೂಕಿನ ಹೀರೇಹಳ್ಳಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಕಳೆದ 25 ವರ್ಷಗಳಿಂದ ಇವರು ಅರ್ಚಕರಾಗಿದ್ದರು. ಅಣ್ಣ - ತಮ್ಮಂದಿರ ಸಮಸ್ಯೆಯಿಂದ ಸಾಯಲು ನಿರ್ಧರಿಸಿದ್ದರಂತೆ. ಆದ್ರೆ ಮುಸ್ಲಿಂ ಧರ್ಮದಲ್ಲಿ ಸತ್ತರೆ ಗೌರವಯುತವಾಗಿ ಮಣ್ಣು ಮಾಡ್ತಾರೆ ಎಂದು ಮತಾಂತರವಾಗಲು ನಿರ್ಧರಿಸಿದ್ದರಂತೆ.
ಇದೀಗ ಮತಾಂತರದಿಂದ ಹಿಂದೆ ಸರಿದಿರುವ ಇವರು, ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಅವರು ಕಾನೂನು ಬದ್ಧವಾಗಿ ಮುಸ್ಲಿಂ ಧರ್ಮಕ್ಕೆ ಹೋಗಬೇಕು ಅಂದುಕೊಂಡಿದ್ದರಂತೆ. ಆದರೆ, ಮತಾಂತರ ಆಗಿಲ್ಲ. ಕಾರಣ ಮಸೀದಿಯಲ್ಲಿ ರೆಕಾರ್ಡ್ಸ್ ಎಲ್ಲಾ ಕೇಳ್ತಾರಂತೆ. ಅಲ್ಲದೇ ಮುಸ್ಲಿಂ ಧರ್ಮಕ್ಕೆ ಮುಂಜಿ ಮಾಡಿಸಿಕೊಂಡು ಹೋದರೆ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅಷ್ಟರೊಳಗೆ ಮಾಜಿ ಸಚಿವರಾದ ಸೊಗಡು ಶಿವಣ್ಣ, ಬಿಜೆಪಿ ಮುಖಂಡ ಅನ್ನದಾನಪ್ಪ ಸೇರಿದಂತೆ ಅನೇಕ ಮುಖಂಡರು ಚಂದ್ರಶೇಖರ್ ಅವರ ಮನವೊಲಿಸಿದ್ದಾರೆ. ಹಾಗಾಗಿ ಅವರು ಇನ್ನೂ ಮತಾಂತರ ಆಗಿಲ್ಲ. ಮುಂದಿನ ದಿನಗಳಲ್ಲೂ ಆಗಲ್ಲ ಎಂದು ಚಂದ್ರಶೇಖರ ಸ್ಪಷ್ಟಪಡಿಸಿದ್ದಾರೆ.