ತುಮಕೂರು: ಕೌಟುಂಬಿಕ ಕಲಹದಿಂದ ಬೇಸತ್ತ ಯುವಕ ಜಿಲ್ಲೆಯ ಕುಣಿಗಲ್ ಪೊಲೀಸ್ ಠಾಣೆ ಎದುರೇ ಬ್ಲೇಡ್ನಿಂದ ಕತ್ತು ಹಾಗೂ ಕೈ ಕೊಯ್ದುಕೊಂಡು ಹುಚ್ಚಾಟ ಮೆರೆದಿದ್ದಾನೆ. ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ಬಿಳಿ ದೇವಾಲಯ ಗ್ರಾಮದ ಅಬ್ರಾಜ್ ಈ ರೀತಿ ನಡೆದು ಕೊಂಡ ಯುವಕ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಬ್ರಾಸ್ ವಿರುದ್ಧ ಆತನ ಪತ್ನಿ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಆ ವೇಳೆ ಅಲ್ಲಿಗೆ ಬಂದ ಅಬ್ರಾಜ್ ಅಂಗಿ ಬಿಚ್ಚಿ ಬ್ಲೇಡ್ ನಿಂದ ಕತ್ತು, ಕೈ ಹಾಗೂ ಮೈ ಭಾಗವನ್ನು ಕೊಯ್ದುಕೊಂಡಿದ್ದಾನೆ. ಆತನ ಹುಚ್ಚಾಟ ಕಂಡು ನಾಗರೀಕರು ಬೆಚ್ಚಿ ಬಿದ್ದಿದ್ದಾರೆ.