ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಶುಕ್ರವಾರ ಬರೋಬ್ಬರಿ 2797 ಮಂದಿಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 18716ಕ್ಕೆ ಏರಿದೆ.
ತುಮಕೂರು: ಶುಕ್ರವಾರ ಒಂದೇ ದಿನ 2797 ಮಂದಿಗೆ ಕೊರೊನಾ, 14 ಜನ ಸೋಂಕಿತರು ಬಲಿ - Karnataka covid death
ತುಮಕೂರು ಜಿಲ್ಲೆಯಲ್ಲಿ ಶುಕ್ರವಾರ ಅತೀ ಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗಿದ್ದು, 14 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ತುಮಕೂರು ತಾಲೂಕಿನಲ್ಲಿ 755 ಮಂದಿ, ಗುಬ್ಬಿ ತಾಲೂಕಿನಲ್ಲಿ 353, ತಿಪಟೂರು ತಾಲೂಕಿನಲ್ಲಿ 335 ಮಂದಿ, ಚಿಕ್ಕನಾಯಕನಹಳ್ಳಿಯಲ್ಲಿ 236, ಕೊರಟಗೆರೆ ತಾಲೂಕಿನಲ್ಲಿ 225, ಶಿರಾ ತಾಲೂಕಿನಲ್ಲಿ 202, ತುರುವೇಕೆರೆ ತಾಲೂಕಿನಲ್ಲಿ 265, ಮಧುಗಿರಿ ತಾಲೂಕಿನಲ್ಲಿ 189, ಪಾವಗಡ ತಾಲೂಕಿನಲ್ಲಿ 99, ಕುಣಿಗಲ್ ತಾಲೂಕಿನಲ್ಲಿ 138 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.
ಶುಕ್ರವಾರ 14 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಒಂದೇ ದಿನ 5 ವರ್ಷದೊಳಗಿನ 32 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. 60 ವರ್ಷ ಮೇಲ್ಪಟ್ಟ 333 ಮಂದಿಗೆ ಸೋಂಕು ತಗುಲಿದೆ. ಐಸಿಯು ಬೆಡ್ಗಳಲ್ಲಿ 123 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.