ಕರ್ನಾಟಕ

karnataka

ETV Bharat / city

ಮಳೆಗಾಲದಲ್ಲಿ ಮದಲಿಂಗನ ಕಣಿವೆಯ ಸೊಬಗು ನೋಡಿರಣ್ಣ.. ವೀಕೆಂಡ್ ಟ್ರಿಪ್‌ಗೆ ಹೇಳಿ ಮಾಡಿಸಿದ ತಾಣ - ಕೋವಿಡ್‌-19

ಮಲೆನಾಡಿನ ಹಚ್ಚಹಸಿರಿನ ಸೊಬಗನ್ನು ಮೈಗೂಡಿಸಿಕೊಂಡಿರೋ ಚಿಕ್ಕನಾಯಕನಹಳ್ಳಿ ತಾಲೂಕಿನ ಮದಲಿಂಗನ ಕಣಿವೆ ಪರ್ವತ ಶ್ರೇಣಿ ಪರಿಸರಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

Tourists visiting to The Valley of Madalinga in Tumkur district after unlock 4.0
ಅನ್‌ಲಾಕ್‌ 4.0; ತುಮಕೂರಿನ ಮದಲಿಂಗನ ಕಣಿವೆ ಪ್ರವಾಸಿಗರ ದಾಂಗುಡಿ

By

Published : Jul 21, 2021, 5:15 PM IST

Updated : Jul 21, 2021, 6:57 PM IST

ತುಮಕೂರು: ಜಿಲ್ಲೆಯಲ್ಲಿ ದೇವರಾಯನದುರ್ಗ ಸೇರಿದಂತೆ ಅನೇಕ ಪರ್ವತ ಶ್ರೇಣಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇವುಗಳ ಪೈಕಿ ಮದಲಿಂಗನ ಕಣಿವೆ ಕೂಡ ಒಂದು. ಸದ್ಯ ಲಾಕ್‌ಡೌನ್‌ ನಿರ್ಬಂಧಗಳು ಮುಗಿದಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ.

ಮಳೆಗಾಲದಲ್ಲಿ ಮದಲಿಂಗನ ಕಣಿವೆಯ ಸೊಬಗು ನೋಡಿರಣ್ಣ.. ವೀಕೆಂಡ್ ಟ್ರಿಪ್‌ಗೆ ಹೇಳಿ ಮಾಡಿಸಿದ ತಾಣ

ಪಶ್ಚಿಮ ಘಟ್ಟದ ಪರಿಸರ ಹೋಲುವ ಕಡಿದಾದ ರಸ್ತೆ ತಿರುವುಗಳು, ಸಾಲು ಸಾಲು ಪರ್ವತ ಶ್ರೇಣಿ, ಮಳೆಗಾಲದಲ್ಲಿ ಹೊಸ ರೀತಿಯಲ್ಲಿ ಕಂಗೊಳಿಸುತ್ತಿವೆ. ಇಲ್ಲಿ ಕಂಡುಬರುವ ಜಾಲಿಗಿರಿ ಹೂಗಳು ಸೇರಿದಂತೆ ವಿವಿಧ ಜಾತಿಯ ಹೂವುಗಳ ಪರಿಮಳ ಸುಂದರ ಲೋಕವನ್ನೇ ಸೃಷ್ಟಿಸಿದೆ.

ಲಾಕ್‌ಡೌನ್ ಮುಗಿದ ನಂತರ ಮದಲಿಂಗನ ಕಣಿವೆಗೆ ಬರುವ ಜನರು ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲುತ್ತಿದ್ದಾರೆ. ಬೆಂಗಳೂರು, ಹಾಸನ, ತುಮಕೂರು ಜಿಲ್ಲೆಯ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿಯೇ ಈ ತಾಣ ವೀಕೆಂಡ್ ಮೋಜು ಮಸ್ತಿಯ ಸ್ಥಳವಾಗಿ ರೂಪುಗೊಂಡಿದೆ.

ಬೈಕ್‌ನಲ್ಲಿ ಕಡಿದಾದ ಗುಡ್ಡಗಳಲ್ಲಿ ಸಾಗುವ ಸವಾರರು, ಹಚ್ಚ ಹಸಿರಿನಿಂದ ಕೂಡಿದ ಪರಿಸರವನ್ನು ಆಸ್ವಾದಿಸುತ್ತಾ ಸಾಗುತ್ತಾರೆ.

Last Updated : Jul 21, 2021, 6:57 PM IST

ABOUT THE AUTHOR

...view details