ತುಮಕೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠದಲ್ಲಿರುವ ಸಿದ್ದಗಂಗೆ ಪವಿತ್ರ ತೀರ್ಥೋದ್ಭವ ಸ್ಥಳ ಸಂಪೂರ್ಣವಾಗಿ ಪುಣ್ಯ ಜಲದಿಂದ ಭರ್ತಿಯಾಗಿದೆ. ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಭಕ್ತರು ಆಗಮಿಸುತ್ತಿದ್ದಾರೆ.
ಸಿದ್ದಲಿಂಗೇಶ್ವರ ದೇವಸ್ಥಾನದ ಎದುರಿಗಿರುವ ಸಿದ್ದಗಂಗೆ ತುಮಕೂರಿನ ಸಿದ್ದಗಂಗ ಮಠದ ಬೆಟ್ಟದ ಮೇಲಿರುವ ಪುಣ್ಯಕ್ಷೇತ್ರ. ಗೋಸಲ ಸಿದ್ದೇಶ್ವರರು ತಮ್ಮ ಪಾದದಿಂದ ಬಂಡೆಗೆ ಗುದ್ದಿ ನೀರು ಹರಿಸಿದ್ದರು ಎಂಬ ಪ್ರತೀತಿಯಿದೆ. ಈ ನೀರು ಹರಿದ ಸ್ಥಳವನ್ನು ಸಿದ್ದಗಂಗೆ ಎಂದು ಕರೆಯಲಾಗುತ್ತಿದೆ.