ಕರ್ನಾಟಕ

karnataka

ETV Bharat / city

ಬೇಬಿ ಟ್ಯಾಂಕರ್​ ಫಿಕ್ಸ್​ ತೈಲ ಕಳ್ಳತನ: ಹೈಟೆಕ್​ ಖದೀಮರ ಕೈಚಳಕ್ಕೆ ಬಂಕ್​ ಮಾಲೀಕರು ಕಂಗಾಲು​​ - ಟ್ಯಾಂಕರ್​ಗಳಿಗೆ ಬೇಬಿ ಟ್ಯಾಂಕರ್ ಫಿಟ್ ಮಾಡಿ ಪೆಟ್ರೋಲ್ ಕಳ್ಳತನ

ಪೆಟ್ರೋಲ್​ ಮತ್ತು ಡೀಸೆಲ್​​ ಟ್ಯಾಂಕರ್​ಗೆ ಬೇಬಿ ಟ್ಯಾಂಕರ್ ಫಿಕ್ಸ್ ಮಾಡಿ 50 ರಿಂದ 100 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಕಳ್ಳತನ ಮಾಡಲಾಗುತ್ತಿತ್ತು. ದಿನೇ ದಿನೇ ತೈಲದ ಲೆಕ್ಕ ವ್ಯತ್ಯಾಸವಾಗ್ತಿದುದನ್ನು ಗಮನಿಸಿದ ಬಂಕ್ ಮಾಲೀಕರು ಪರಿಶೀಲನೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.

tiptur-petrol-and-desal-theft
ತೈಲ ಕಳ್ಳತನ

By

Published : Jul 1, 2021, 10:54 PM IST

ತುಮಕೂರು:ಜಿಲ್ಲೆಯ ತಿಪಟೂರಿನಲ್ಲಿ ತೈಲ ಸಾಗಿಸುತ್ತಿದ್ದ ಟ್ಯಾಂಕರ್​ಗಳಿಗೆ ಬೇಬಿ ಟ್ಯಾಂಕರ್ ಫಿಟ್ ಮಾಡಿ ಪೆಟ್ರೋಲ್ ಕದಿಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳತನದ ತಂತ್ರಗಾರಿಕೆ ಕಂಡು ಬಂಕ್ ಮಾಲೀಕರು ಬೆಚ್ಚಿಬಿದ್ದಿದ್ದಾರೆ.

ಬೇಬಿ ಟ್ಯಾಂಕರ್​ ಫಿಕ್ಸ್​ ತೈಲ ಕಳ್ಳತನ

ಟ್ಯಾಂಕರ್​ಗೆ ಬೇಬಿ ಟ್ಯಾಂಕರ್ ಫಿಕ್ಸ್ ಮಾಡಿ 50 ರಿಂದ 100 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಕಳ್ಳತನ ಮಾಡಲಾಗುತ್ತಿತ್ತು. ತಿಪಟೂರಿನ ಆದಿತ್ಯ ಪೆಟ್ರೋಲ್ ಏಜೆನ್ಸಿಗೆ ಸಪ್ಲೈ ಆಗ್ತಿದ್ದ ಪೆಟ್ರೋಲ್, ಹಾಸನದ ಆಯಿಲ್ ಟರ್ಮಿನಲ್‌ನಿಂದ ಬರುತ್ತಿತ್ತು. ದಿನ ಕಳೆದಂತೆ ತೈಲದಲ್ಲಿ ಲೆಕ್ಕ ವ್ಯತ್ಯಾಸವಾಗ್ತಿರೋದನ್ನು ಗಮನಿಸಿದ ಬಂಕ್ ಮಾಲೀಕರು ಪರಿಶೀಲನೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತಾಗಿ ಟ್ಯಾಂಕರ್ ಚಾಲಕನನ್ನು​ ವಿಚಾರಣೆ ಮಾಡಿದಾಗ ಸತ್ಯ ಬೆಳಕಿಗೆ ಬಂದಿದೆ. ಟ್ಯಾಂಕರ್​ಗಳ ಮಾಲೀಕರಿಂದಲೇ ಕಳ್ಳತನವಾಗುತ್ತಿದುದು ಗೊತ್ತಾಗಿದೆ. ತಿಪಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details