ಕರ್ನಾಟಕ

karnataka

ETV Bharat / city

ತುಮಕೂರಿನ ಶನೇಶ್ವರ ದೇಗುಲಕ್ಕೆ ನುಗ್ಗಿದ ಕಳ್ಳರು : ಚಿನ್ನಾಭರಣಗಳನ್ನು ದೋಚಿ ಪರಾರಿ

ದೇಗುಲದಲ್ಲಿ ಇದ್ದ ಹುಂಡಿಯನ್ನು ಒಡೆದು ಹಣವನ್ನು ದೋಚಿದ್ದಾರೆ. ಅಲ್ಲದೇ ದೇಗುಲದಲ್ಲಿ ಇದ್ದ ದೇವಿಯ ಎರಡು ಮಾಂಗಲ್ಯ ಸರ ಹಾಗೂ ಶನಿ ದೇವರ ಮೂರು ಚಿನ್ನದ ಕಣ್ಣುಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ..

Theft at Tumkur Shaneshwara Temple
ಶನೇಶ್ವರ ದೇವಾಲಯದಲ್ಲಿ ಕಳ್ಳತನ

By

Published : Dec 1, 2021, 2:18 PM IST

ತುಮಕೂರು :ತಾಲೂಕಿನ ಬೆಳ್ಳಾವಿ ಹೋಬಳಿ ಕೋಡಿ ಶನೇಶ್ವರ ಸ್ವಾಮಿ ದೇವಾಲಯಕ್ಕೆ ನುಗ್ಗಿ ಕಳ್ಳರು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಇಂದು ನಸುಕಿನ ಜಾವ ಸುಮಾರು 3 ಗಂಟೆ ಸಂದರ್ಭ ಕಳ್ಳತನ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಶನೇಶ್ವರ ದೇವಾಲಯದಲ್ಲಿ ಕಳ್ಳತನ..

ದೇಗುಲದಲ್ಲಿ ಇದ್ದ ಹುಂಡಿಯನ್ನು ಒಡೆದು ಹಣವನ್ನು ದೋಚಿದ್ದಾರೆ. ಅಲ್ಲದೇ ದೇಗುಲದಲ್ಲಿ ಇದ್ದ ದೇವಿಯ ಎರಡು ಮಾಂಗಲ್ಯ ಸರ ಹಾಗೂ ಶನಿ ದೇವರ ಮೂರು ಚಿನ್ನದ ಕಣ್ಣುಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ದೇವಸ್ಥಾನದ ದುರಸ್ಥಿ ಕಾರ್ಯ ನಡೆಯುತ್ತಿದೆ. ಗರ್ಭಗುಡಿಯನ್ನು ಭದ್ರವಾಗಿ ಮುಚ್ಚಲಾಗಿತ್ತು. ಹೀಗಿದ್ದರೂ ಮೇಲ್ಛಾವಣಿ ಮೇಲಿಂದ ಗರ್ಭಗುಡಿಯೊಳಗೆ ಇಳಿದಿರುವ ಚೋರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗ್ತಿದೆ. ಈ ಸಂಬಂಧ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹತ್ಯೆಗೆ ಸ್ಕೆಚ್‌; ಸಿಸಿಬಿಯಿಂದ ಪ್ರಕರಣದ ತನಿಖೆ

ABOUT THE AUTHOR

...view details