ತುಮಕೂರು: ಈಗಾಗಲೇ ಸಾರಿಗೆ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಪೊಲೀಸರು ಭಾರಿ ಮೊತ್ತದ ದಂಡ ವಿಧಿಸುತ್ತಿದ್ದು, ತುಮಕೂರಿನಲ್ಲಿ ಬೈಕ್ ಸವಾರನೊಬ್ಬನನ್ನು ಪೊಲೀಸರು ಅಡ್ಡಹಾಕಿ ದಾಖಲೆ ಪರಿಶೀಲನೆ ನಡೆಸುವ ವೇಳೆ ಚಾಲಕಿ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ.
ದ್ವಿಚಕ್ರವಾಹನ ದಾಖಲೆ ಪರಿಶೀಲನೆ ವೇಳೆ ಸಿಕ್ಕಿಬಿದ್ದ ಬೈಕ್ ಚೋರ - ಬೈಕ್ ಕಳ್ಳ
ತುಮಕೂರಿನಲ್ಲಿ ವಾಹನ ಸವಾರನೊಬ್ಬನನ್ನು ಪೊಲೀಸರು ಅಡ್ಡಹಾಕಿ ದಾಖಲೆ ಪರಿಶೀಲನೆ ನಡೆಸುವ ವೇಳೆ ಚಾಲಕಿ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ.
ಬೈಕ್ ಚೋರ
ತುಮಕೂರಿನ ಕುಣಿಗಲ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ತಿಲಕ್ ಪಾರ್ಕ್ ಪೊಲೀಸರು ಕೆಎ 06-ಜೆಯು 0643 ನಂಬರಿನ ಹೋಂಡಾ ಡಿಯೋ ಬೈಕ್ನಲ್ಲಿ ಬರುತ್ತಿದ್ದ ಸವಾರ ಶರತ್ ಕಾರಂತ ಎಂಬಾತನನ್ನು ಅಡ್ಡಹಾಕಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬೈಕ್ನ ದಾಖಲೆಗಳನ್ನು ನೀಡುವಂತೆ ವಿಚಾರಿಸಿದಾಗ ಚಾಲಕ ಗಲಿಬಿಲಿಗೊಂಡಿದ್ದಾನೆ, ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ದ್ವಿಚಕ್ರವಾಹನ ಕಳ್ಳತನ ಮಾಡುತ್ತಿದ್ದಾನೆ ಎಂದು ಬೆಳಕಿಗೆ ಬಂದಿದೆ.
ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.