ತುಮಕೂರು :ರೈತರೊಬ್ಬರು ಬೋನ್ನಲ್ಲಿ ಕೂಡಿ ಹಾಕಿದ್ದ ಕೋತಿಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳ ಜತೆಗೆ ಬಜರಂಗದಳ ಕಾರ್ಯಕರ್ತರು ರಕ್ಷಿಸಿರುವ ಘಟನೆ ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಡೆದಿದೆ.
ಇಲ್ಲಿನ ರೈತರೊಬ್ಬರ ತೆಂಗಿನ ತೋಟದಲ್ಲಿ ನಿತ್ಯ ಕೋತಿಗಳು ಕಾಟ ಕೊಡುತ್ತಿದ್ದವು ಎನ್ನಲಾಗಿದೆ. ಮಂಗಗಳ ಕಾಟಕ್ಕೆ ಬೇಸತ್ತು ಅವುಗಳನ್ನು ರೈತ ಬೋನ್ನಲ್ಲಿ ಕೂಡಿ ಹಾಕಿದ್ದರು. ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದ ಹಿಂಭಾಗದಲ್ಲಿರುವ ತೋಟದಲ್ಲಿ ಬೋನ್ನಲ್ಲಿ ಕೂಡಿ ಹಾಕಿದ್ದ 30 ಕೋತಿಗಳನ್ನು ಈಗ ರಕ್ಷಿಸಲಾಗಿದೆ.