ತುಮಕೂರು:ನಗರದ ತನಿಷ್ಕ ಜುವೆಲರ್ಸ್ನಲ್ಲಿ ಕಳ್ಳತನ ಮಾಡಿದ್ದ ಬರೋಬ್ಬರಿ 1 ಕೆಜಿ 854 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೊಹಮದ್ ಆದಿಲ್, ರಿತೇಶ್ ಕುರುಪ್, ಮಹೇಶ, ಮೀನಾಕ್ಷಿ ಮತ್ತು ರುಕ್ಸಾನ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 4,05,000 ರೂ. ನಗದು ಹಾಗೂ 87,49,254 ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೂನ್ 20ರಂದು ಜುವೆಲರ್ಸ್ ಮಾಲೀಕ ಪ್ರಕಾಶ್ ರಾಥೋಡ್ ಎಂಬುವವರು ತುಮಕೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಮೊಹಮ್ಮದ್ ಆರಿಫ್ ಮತ್ತು ರಿತೇಶ್ ಎಂಬುವರು 2 ಕೆಜಿ 470 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಆರೋಪಿಸಿದ್ದರು.